ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಹಾಯ ಧನ; ಇಲ್ಲಿದೆ ವಿವರ

How a Single Page Application Works - Proche

ಕೋಲಾರ: 2023-24ನೇ ಸಾಲಿನ ಜಿಲ್ಲಾವಲಯದ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಮೀನುಗಾರಿಕೆ ಸಲಕರಣೆ ಕಿಟ್ಟು (ಬಲೆ) ಅಥವಾ ಪೈಬರ್‌ಗ್ಲಾಸ್ ಹರಿಗೋಲು (ತೆಪ್ಪ) ಹಾಗೂ ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಯೋಜನೆಯಡಿ ದ್ವಿಚಕ್ರ ವಾಹನ ಮತ್ತು ಐಸ್‌ ಬಾಕ್ಸ್ ಖರೀದಿಗೆ ಸಹಾಯಧನ ಹಾಗೂ ಬಾವಿ ಮತ್ತು ಹೊಂಡಗಳನ್ನು ಹೊಂದಿರುವ ರೈತರಿಗೆ ಉಚಿತ ಮೀನುಮರಿ ವಿತರಣೆ ಕಾರ್ಯಕ್ರಮದಡಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮೀನುಗಾರರು ಸಂಬಂಧಿಸಿದ ತಾಲ್ಲೂಕು ಮೀನುಗಾರಿಕೆ ಕಛೇರಿಯಲ್ಲಿ ಸೆಪ್ಟೆಂಬರ್ 25 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕೋಲಾರ-9972717346, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಾಲೂರು-99727173346, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮುಳಬಾಗಿಲು-9482475770, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೀನಿವಾಸಪುರ-8861606263, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಬೇತಮಂಗಲ (ಕೆ.ಜಿ.ಎಫ್ ಮತ್ತು ಬಂಗಾರಪೇಟೆ)-9482475770, ಮೀನುಗಾರಿಕೆ ಉಪ ನಿರ್ದೇಶಕರು, ಕೋಲಾರ-9740138511 ಹಾಗೂ ಮೀನುಗಾರಿಕೆ ಸಹಾಯವಾಣಿ-8277200300 ಗೆ ಸಂಪರ್ಕಿಸಬಹುದು ಎಂದು ಕೋಲಾರ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read