ಪ್ರತಿ ವರ್ಷ ಭಾರತದ ಒಂದಿಲ್ಲೊಂದು ರಾಜ್ಯದಲ್ಲಿ ಚುನಾವಣೆ ನಡೆದೇ ನಡೆಯುತ್ತದೆ. ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಅಗತ್ಯ. ವೋಟರ್ ಐಡಿ, ಚುನಾವಣೆಯಲ್ಲಿ ಹಕ್ಕು ಚಲಾಯಿಸುವ ಮೂಲಕ ಸೂಕ್ತ ನಾಯಕನನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
ಚುನಾವಣಾ ದಿನಾಂಕ ಹತ್ತಿರ ಬಂದಾಗ ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸುವುದು ಹೇಗೆಂದು ನಾವು ತಲೆಕೆಡಿಸಿಕೊಳ್ಳುತ್ತೇವೆ. ಮತದಾರರ ಗುರುತಿನ ಚೀಟಿ ಪಡೆಯಲು ಜನರು ಹೆಚ್ಚಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಾರೆ.
ಮತದಾರರ ಗುರುತಿನ ಚೀಟಿಯನ್ನು ಪಡೆಯುವುದು ಸುಲಭದ ಪ್ರಕ್ರಿಯೆ. ಆದರೆ ಅರಿವಿನ ಕೊರತೆಯಿಂದಾಗಿ ಇದು ಅನೇಕರಿಗೆ ಸವಾಲಾಗಿ ಕಾಣಿಸಬಹುದು. ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್ ಮೂಲಕ ಸುಲಭವಾಗಿ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಹಾಕಬಹುದು. ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಪಡೆಯುವ ಸರಳ ವಿಧಾನವನ್ನು ನೋಡೋಣ.
ವೋಟರ್ ಐಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
ಮತದಾರರ ಗುರುತಿನ ಚೀಟಿ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ವಿಸಿಟ್ ಮಾಡಬೇಕು. ಮತದಾರರ ಗುರುತಿನ ಚೀಟಿಯನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು 10 ದಿನಗಳಾಗಬಹುದು.
ಮೊದಲು ಚುನಾವಣಾ ಆಯೋಗದ ವೆಬ್‌ಸೈಟ್ ತೆರೆಯಿರಿ.
ಮೇನ್ ಪೇಜ್‌ನಲ್ಲಿರುವ ರಾಷ್ಟ್ರೀಯ ಮತದಾರರ ಸೇವೆಗಳ ಪೋರ್ಟಲ್ ಮೇಲೆ ಟ್ಯಾಪ್ ಮಾಡಿ.
ನಂತರ ಆನ್‌ಲೈನ್ ಅಪ್ಲೈ ವಿಭಾಗದಲ್ಲಿ ಹೊಸ ಮತದಾರರ ನೋಂದಣಿ ಮೇಲೆ ಕ್ಲಿಕ್ ಮಾಡಿ.
ಫಾರ್ಮ್-6 ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ. ಅದರಲ್ಲಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಬ್‌ಮಿಟ್ ಮಾಡಿಕೊಳ್ಳಿ.
ಬಳಿಕ ನೀವು ಇಮೇಲ್ ಐಡಿಯಲ್ಲಿ ಲಿಂಕ್ ಅನ್ನು ಸ್ವೀಕರಿಸುತ್ತೀರಿ.
ಈ ಲಿಂಕ್ ಮೂಲಕ ಮತದಾರರ ಗುರುತಿನ ಚೀಟಿ ಅಪ್ಲಿಕೇಶನ್ ಸ್ಟೇಟಸ್ ಅನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.
ಈ ಪ್ರಕ್ರಿಯೆ ಬಳಿಕ 10 ದಿನಗಳೊಳಗಾಗಿ ಮತದಾರರ ಗುರುತಿನ ಚೀಟಿ ನಿಮಗೆ ಲಭ್ಯವಾಗುತ್ತದೆ.