![](https://tfpc.in/wp-content/uploads/2024/04/Screenshot-2024-04-26-194603.png?v=1714141300)
ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ ಅವರ ಮುಂದಿನ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಪರದ’ ಎಂಬ ಟೈಟಲ್ ಇಡಲಾಗಿದ್ದು, ಸಮಂತಾ, ರಾಜ್ ಮತ್ತು ಡಿಕೆ ಈ ಪೋಸ್ಟರನ್ನು ಲಾಂಚ್ ಮಾಡಿದ್ದಾರೆ. ಈ ಕುರಿತು ನಟಿ ಅನುಪಮಾ ಪರಮೇಶ್ವರನ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಪ್ರವೀಣ್ ಕಂಡ್ರೇಗುಳ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಗೋಪಿ ಸುಂದರ್ ಸಂಗೀತ ಸಂಯೋಜನೆ ನೀಡುತ್ತಿದ್ದಾರೆ. ಧರ್ಮೇಂದ್ರ ಕಾಕರಲ ಸಂಕಲನ, ವನಮಾಲಿ ಸಾಹಿತ್ಯ, ಶ್ರೀನಿವಾಸ್ ಕಾಳಿಂಗ ಕಲಾ ನಿರ್ದೇಶನವಿದೆ. ಅನುಪಮಾ ಪರಮೇಶ್ವರನ್ ಮತ್ತು ದರ್ಶನಾ ರಾಜೇಂದ್ರನ್, ಸಂಗೀತ, ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆನಂದ್ ಮೀಡಿಯಾ ಬ್ಯಾನರ್ ನಲ್ಲಿ ವಿಜಯ್ ಡೊಂಕಡ, ಶ್ರೀನಿವಾಸಲು ಪಿ.ವಿ, ಶ್ರೀಧರ್ ಮಕ್ಕುವ ನಿರ್ಮಾಣ ಮಾಡಿದ್ದಾರೆ.