ಶಬರಿಮಲೆ ಎಂದಾಕ್ಷಣ ನೆನಪಿಗೆ ಬರುವುದು ಅರವಣ ಪ್ರಸಾದ. ಅಯ್ಯಪ್ಪ ಸ್ವಾಮಿಯ ಚಿತ್ರವಿರುವ ಸಣ್ಣ ತವರದ ಪಾತ್ರೆಯಲ್ಲಿ ಈ ಪ್ರಸಾದವನ್ನು ಶಬರಿಮಲೆಯಲ್ಲಿ ಅಯ್ಯಪ್ಪನ ಭಕ್ತರಿಗೆ ವಿತರಿಸಲಾಗುತ್ತದೆ. ಆದರೆ, ಸುಮಾರು ಒಂದು ವರ್ಷದಿಂದ ಸಂಗ್ರಹಿಸಿಟ್ಟಿದ್ದ ಅರವಣ ಪ್ರಸಾದದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳಿವೆ ಎಂದು 2023ರ ಜನವರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಆದರೆ, ಅರ್ಜಿದಾರರು ಈ ಬಗ್ಗೆ ಯಾವುದೇ ಸಾಕ್ಷ್ಯವನ್ನು ಸಲ್ಲಿಸದ ಕಾರಣ, ಅದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೆ, ಟ್ರಾವಂಕೋರ್ ದೇವಸ್ವಂ ಮಂಡಳಿಯು ಸುಮಾರು 6.65 ಲಕ್ಷ ಟಿನ್ ಕಂಟೈನರ್‌ಗಳಲ್ಲಿನ ಅರಾವಣ ಪ್ರಸಾದವನ್ನು ದೀರ್ಘಾವಧಿಯ ಸಂಗ್ರಹಣೆ ಕಾರಣದಿಂದ ಭಕ್ತರಿಗೆ ವಿತರಿಸದಿರಲು ನಿರ್ಧರಿಸಿದೆ. ಮೊದಲಿಗೆ ಪ್ರಸಾದವನ್ನು ಕಾಡಿನಲ್ಲಿ ಎಸೆಯಲು ಪ್ರಸ್ತಾಪಿಸಲಾಯಿತು.
ಆದರೆ ಪ್ರಸಾದವನ್ನು ಕಾಡಿನಲ್ಲಿ ಎಸೆಯುವ ಬದಲು ವೈಜ್ಞಾನಿಕ ವಿಧಾನದ ಮೂಲಕ ಮರುಬಳಕೆ ಮಾಡುವುದು ಉತ್ತಮ ಎಂದು ಅಂತಿಮವಾಗಿ ನಿರ್ಧರಿಸಲಾಯಿತು. ಇದಕ್ಕಾಗಿ ಆಸಕ್ತ ಕಂಪನಿಗಳಿಂದ ಟೆಂಡರ್ ಕರೆಯಲಾಗಿದೆ. ಕೇರಳದ ಕಂಪನಿ ಇಂಡಿಯನ್ ಸೆಂಟ್ರಿಫ್ಯೂಜ್ ಎಂಜಿನಿಯರಿಂಗ್ ಸೊಲ್ಯೂಷನ್ಸ್(ಐಸಿಇಎಸ್) ಈ ಬಿಡ್ ಅನ್ನು ಗೆದ್ದಿದೆ. 5.50 ಕೋಟಿ ಮೌಲ್ಯದ ಅರವಣ ಪ್ರಸಾದವನ್ನು ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ಬಳಸಲಾಗುವುದು ಎಂದು ಐಸಿಇಎಸ್ ತಿಳಿಸಿದೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಕಂಪನಿಯು 1.15 ಕೋಟಿ ರೂ. ತೆಗೆದುಕೊಳ್ಳುತ್ತಿದೆ. ಮೊದಲು 6.65 ಲಕ್ಷ ಕಂಟೈನರ್‌ಗಳಲ್ಲಿ ಅರವಣ ಪ್ರಸಾದವನ್ನು ಕೊಟ್ಟಾಯಂನಲ್ಲಿರುವ ತಮ್ಮ ಕಚೇರಿಗೆ ಮತ್ತು ಅಲ್ಲಿಂದ ಹೈದರಾಬಾದ್‌ನಲ್ಲಿರುವ ತಮ್ಮ ಸಂಸ್ಕರಣಾ ಘಟಕಕ್ಕೆ ಸ್ಥಳಾಂತರಿಸುವುದಾಗಿ ಐಸಿಇಎಸ್ ತಿಳಿಸಿದೆ.