ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ವಾಣಿಜ್ಯ ಚಟುವಟಿಕೆ / ಉದ್ಯಮಗಳನ್ನು ಪ್ರಾರಂಭಿಸಲು ಇಚ್ಚಿಸುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಡಾಕ್ ಸಂಸ್ಥೆಯ ಮೂಲಕ ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯಮ ಶೀಲತಾ ತರಬೇತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತೆಗಳು
- ವಯೋಮಿತಿ-ಕನಿಷ್ಠ21 ವರ್ಷಹಾಗೂ ಗರಿಷ್ಠ 50 ವರ್ಷ
- ಶೈಕ್ಷಣಿಕಅರ್ಹತೆ-ಪಿ.ಯು.ಸಿಮತ್ತು ಮೇಲ್ಪಟ್ಟು
ತರಬೇತಿಯ ಬಗ್ಗೆ ವಿವರ
- ಉದ್ದಿಮೆ, ವಾಣಿಜ್ಯಚಟುವಟಿಕೆಗಳನ್ನುಪ್ರಾರಂಭಿಸಲು ಉತ್ತೇಜನ ಮತ್ತು ಮಾರ್ಗದರ್ಶನ ನೀಡಲು ಉದ್ಯಮಶೀಲತಾ ತರಬೇತಿಯನ್ನು ಆಯೋಜಿಸಲಾಗಿದೆ.
- ಸರ್ಕಾರದವಿವಿಧಇಲಾಖೆಗಳಿಂದ ಪ.ಜಾತಿ/ಪ.ಪಂಗಡದವರಿಗೆ ಉದ್ದಿಮೆಗಳನ್ನು ಸ್ಥಾಪಿಸಲು ನೀಡಲಾಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು.
- ರಾಷ್ಟ್ರೀಕೃತಬ್ಯಾಂಕ್ಹಾಗೂ ಇತರೆ ಬ್ಯಾಂಕ್‌ಗಳು ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಂದ ನೀಡಲಾಗುವ ಸಾಲ ಸೌಲಭ್ಯದ ಮಾಹಿತಿಯನ್ನು ನೀಡಲಾಗುವುದು.
- ಆಯಾಜಿಲ್ಲಾಕೇಂದ್ರಗಳಲ್ಲಿ ಹತ್ತು ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
- ತರಬೇತಿಗೆಹಾಜರಾಗಲುಪ್ರತಿ ಅಭ್ಯರ್ಥಿಗೆ ಪ್ರಯಾಣ ಭತ್ಯೆಯಾಗಿ ಹತ್ತು ದಿನಗಳಿಗೆ ರೂ. 1,000/-ಗಳ ಕ್ರೋಡೀಕೃತ ಮೊತ್ತವನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.11.2023
ಅರ್ಜಿ ಸಲ್ಲಿಸಲು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ www.scsptsp.Karnataka.gov.in r ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಲ್ಯಾಣಮಿತ್ರ 24 x 7 ಸಹಾಯವಾಣಿ 9482300400ಗೆ ಸಂಪರ್ಕಿಸಬಹುದಾಗಿದೆ.