![](https://kannadadunia.com/wp-content/uploads/2020/12/drip-irrigation.jpg)
ಪ್ರಸಕ್ತ(2024-25) ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಕಾರ್ಯಕ್ರಮದಡಿ ಪ.ಜಾತಿ/ ಪ.ಪಂಗಡ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನದ ಇತರೆ ವರ್ಗದ ರೈತರಿಗೆ ಶೇ.55 ಸಹಾಯಧನ ಸೌಲಭ್ಯವಿದೆ.
ತೋಟಗಾರಿಕೆಯಲ್ಲಿ ಯಾಂತ್ರೀಕರಣರಡಿ ಕಳೆ ಕೊಚ್ಚುವ ಯಂತ್ರ, ಮರ ಕತ್ತರಿಸುವ ಯಂತ್ರ, ತಳ್ಳುವ ಗಾಡಿ, ಅಲ್ಯೂಮಿನಿಯಂ ಏಣಿ, ಅಡಿಕೆ ದೋಟಿ, ಪವರ್ ವೀಡರ್, ಕಾಳುಮೆಣಸು ಬಿಡಿಸುವ ಯಂತ್ರ, ಅಡಿಕೆ ಬಿಡಿಸುವ ಯಂತ್ರಗಳಿಗೆ ಪ.ಜಾತಿ/ ಪ.ಪಂಗಡ ವರ್ಗ, ಮಹಿಳೆಯರಿಗೆ ರೈತರಿಗೆ ಶೇ.50 ರಷ್ಟು ಸಹಾಯಧನ ಮತ್ತು ಇತರೆ ವರ್ಗದ ರೈತರಿಗೆ ಶೇ.40 ರಷ್ಟು ಸಹಾಯಧನ ನೀಡಲಾಗುವುದು.
ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆ ತಾಳೆ ಅಭಿಯಾನ ಯೋಜನೆ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು. ಬಳಗುಂದ ಮತ್ತು ಕೂಡಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಗಿಡಗಳು ಲಭ್ಯವಿರುತ್ತದೆ(ಪ್ರತಿ ಗಿಡಕ್ಕೆ 25 ರೂ.). ಹೆಚ್ಚಿನ ವಿವರಗಳಿಗೆ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಲಾಗಿದೆ.