ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹೆಚ್ಚುವರಿ ಅಕ್ಕಿ ಬದಲು ಹಣ ನೀಡುವ ಯೋಜನೆಗೆ ಸೋಮವಾರ ಚಾಲನೆ ನೀಡಿದರು.ಸದ್ಯ ಎರಡು ಜಿಲ್ಲೆಗಳ ಜನರಿಗೆ ಹಣ ವರ್ಗಾವಣೆಯಾಗುತ್ತಿದ್ದು, ಹಂತ ಹಂತವಾಗಿ ವಿವಿಧ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಇನ್ನೂ ನಿಮ್ಮ ಖಾತೆಗೆ ಅನ್ನಭಾಗ್ಯದ ಅಕ್ಕಿ ಹಣ ಬಂದಿದೆಯೋ ಇಲ್ವೋ ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
https://ahara.kar.nic.in/status1/status_of_dbt.aspx ಈ ಲಿಂಕ್ ಬಳಸಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಪಡೆದುಕೊಳ್ಳಬಹುದು.
ಚೆಕ್ ಮಾಡುವುದು ಹೇಗೆ..?
1) ಆಹಾರ ಇಲಾಖೆಯ ವೆಬ್ ಸೈಟ್ ಗೆ ಲಾಗಿನ್ ಆಗಬೇಕು
2) ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ.
3) ನಂತರ ನಿಗದಿತ ಕಾಲಂ ನಲ್ಲಿ ರೇಷನ್ ಕಾರ್ಡ್ ನ ನಂಬರ್ ಕೇಳುತ್ತದೆ, ಅಂದ್ರೆ ಆರ್ ಸಿ ನಂಬರ್ನ್ನು ನಮೂದಿಸಿ
4) ನಂತರ ನಿಮ್ಮ ರೇಷನ್ ಕಾರ್ಡ್ ನ ಮೇಲ್ಬಾಗದಲ್ಲಿ ಕಾಣುವ ಆರ್ ಸಿ ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
5) ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್ಗೆ ಹಣ ಜಮಾ ಆಗಿದ್ಯಾ, ಒಂದೊಮ್ಮೆ ಖಾತೆಗೆ ಹಣ ಬರದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ನಿಮಗೆ ಸಿಗಲಿದೆ.
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲು ನೇರ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, 170 ರೂ ಹಣ ನೇರವಾಗಿ ಖಾತೆಗೆ ವರ್ಗಾವಣೆಯಾಗಲಿದೆ.2013ರಲ್ಲಿ ಅನ್ನಭಾಗ್ಯ ಅಕ್ಕಿ ಯೋಜನೆಯನ್ನು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದಿದ್ದರು. ಮೇ 13ರಂದು ಐತಿಹಾಸಿಕ ಅನ್ನಭಾಗ್ಯ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಜುಲೈ ತಿಂಗಳಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿತು. ಅನ್ನಭಾಗ್ಯ ಯೋಜನೆಯಿಂದ ರಾಜ್ಯದಲ್ಲಿ ಸುಮಾರು 1.08 ಕೋಟಿ ಕುಟುಂಬಗಳು ಯೋಜನೆ ಲಾಭ ಪಡೆಯುತ್ತಿವೆ.ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದು, ಹೆಚ್ಚುವರಿ ಅಕ್ಕಿ ಸಿಗುವವರೆಗೂ 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ ಕೆಜಿ ಅಕ್ಕಿಗೆ 34 ರೂ. ನಂತೆ 170 ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುವುದಾಗಿ ತಿಳಿಸಿದೆ.