ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಚೆಲ್ಲಾಟದ ಬಹಳಷ್ಟು ವಿಡಿಯೋಗಳು ವೈರಲ್ ಆಗುವ ಮೂಲಕ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇದೇ ರೀತಿ ಈಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ನಾಯಿಯೊಂದಿಗೆ ಚೆಲ್ಲಾಟವಾಡಲು ಹೋದ ಮರಿಕೋತಿಯೊಂದು ಬಳಿಕ ಪರದಾಡಿದೆ.
32 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 2 ದಶಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿರುವ ಈ ವಿಡಿಯೋದಲ್ಲಿ ಗುಲಾಬಿ ಪ್ಯಾಂಟ್‌ನೊಂದಿಗೆ ಹಳದಿ ಮತ್ತು ಬಿಳಿ ಬಣ್ಣದ ಟಾಪ್ ಧರಿಸಿರುವ ಮರಿ ಕೋತಿ, ನಾಯಿಯೊಂದಿಗೆ ಉಲ್ಲಾಸದ ಜಗಳದಲ್ಲಿ ತೊಡಗುತ್ತದೆ.
ಈ ವೀಡಿಯೊದ ಮೊದಲ ಭಾಗವು ಮರಿ ಮಂಗವನ್ನು ತೋರಿಸುತ್ತಿದ್ದು, ಬೇಲಿಯ ಒಂದು ಬದಿಯಲ್ಲಿ ನಾಯಿ ನಿಂತಿದೆ. ಈ ವೇಳೆ ಒಬ್ಬ ವ್ಯಕ್ತಿ ಕೋತಿಗೆ ಸ್ವಲ್ಪ ಆಹಾರವನ್ನು ನೀಡುತ್ತಾನೆ. ಆದಾಗ್ಯೂ, ಮಂಗವು ಅದನ್ನು ಪಡೆಯುವ ಮೊದಲು ನಾಯಿಯು ಆಹಾರವನ್ನು ತ್ವರಿತವಾಗಿ ಕಸಿದುಕೊಳ್ಳುತ್ತದೆ.
ಕೋಪಗೊಂಡ ಕೋತಿಯು ತನ್ನ ಚಿಕ್ಕ ಕೈಗಳಿಂದ ಬೇಲಿಯ ಮೂಲಕ ನಾಯಿಯನ್ನು ಎಳೆದುಕೊಂಡು ಅದನ್ನು ಕಚ್ಚಲು ಮತ್ತು ಜಗಳವಾಡಲು ಪ್ರಾರಂಭಿಸಿದೆ. ತಪ್ಪಿಸಿಕೊಳ್ಳಲು ಮುಂದಾದ ನಾಯಿ, ಬೇಲಿಯ ಇನ್ನೊಂದು ಬದಿಯಿಂದ ಕೋತಿಗೆ ತೀವ್ರವಾಗಿ ಬೊಗಳುತ್ತದೆ. ಅಷ್ಟರಲ್ಲಿ ಮರಿ ಕೋತಿ ಕೋಪದಿಂದ ಹಿಂತಿರುಗಿ ನೋಡುತ್ತದೆ.
ವೈರಲ್ ಪ್ರಾಣಿಗಳ ವೀಡಿಯೊ ನಂತರ ಮರುದಿನಕ್ಕೆ ಮುಂದುವರಿದಿದ್ದು, ಈ ಸಮಯದಲ್ಲಿ, ಎರಡರ ನಡುವೆ ಯಾವುದೇ ಬೇಲಿ ಇಲ್ಲ. ಮರಿ ಕೋತಿ ಮತ್ತು ನಾಯಿ ಎರಡೂ ಒಂದೇ ಜಾಗದಲ್ಲಿದ್ದು, ಪೂರ್ಣ ಪ್ರಮಾಣದ ಜಗಳಕ್ಕೆ ಕಾರಣವಾಗಿದೆ. ಮಂಗ ಬಿಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಂತೆ ನಾಯಿ, ಕೋತಿಯ ಮೇಲೆ ದಾಳಿ ಮಾಡುತ್ತದೆ. ಆಗ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದು, ಎರಡು ಪ್ರಾಣಿಗಳನ್ನು ಪ್ರತ್ಯೇಕಿಸಲು ಹರಸಾಹಸಪಟ್ಟಿದ್ದಾರೆ.