
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮೇಲಿಂದ ಮೇಲೆ ಕುತೂಹಲಕಾರಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರನ್ನು ಒಂದು ವಿಡಿಯೋ ಬೆಚ್ಚಿ ಬೀಳಿಸಿದೆಯಂತೆ. ಅದನ್ನು ಅವರು ಶೇರ್ ಮಾಡಿದ್ದಾರೆ.
‘ಕಡಿಮೆ ವೆಚ್ಚದ’ ಟ್ರೆಡ್‌ಮಿಲ್‌ನ ವಿಡಿಯೋ ಇದಾಗಿದೆ. ವ್ಯಕ್ತಿಯೊಬ್ಬರು ಕೆಲವು ಹನಿ ಡಿಶ್‌ವಾಶ್ ದ್ರವವನ್ನು ನೆಲದ ಮೇಲೆ ಸುರಿಯುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ಅವನು ಕೆಲವು ಹನಿ ನೀರನ್ನು ಸೇರಿಸುತ್ತಾನೆ ಮತ್ತು ನೆಲವನ್ನು ಜಾರುವಂತೆ ಮಾಡುತ್ತಾನೆ.
ವಿಡಿಯೋ ಮುಂದುವರಿದಂತೆ, ಆತ ಟ್ರೆಡ್‌ಮಿಲ್‌ನಲ್ಲಿ ನಡೆಯುವಂತೆಯೇ ಜಾರು ಮೇಲ್ಮೈಯಲ್ಲಿ ನಡೆಯಲು ಪ್ರಾರಂಭಿಸುತ್ತಾನೆ. ಅವನು ತನ್ನ ವೇಗವನ್ನು ಸಹ ಹೆಚ್ಚಿಸುತ್ತಾನೆ. ಇದನ್ನು ನೋಡಿರುವ ಆನಂದ್ ಮಹೀಂದ್ರಾ ಈತನಿಗೆ ಇನ್ನೋವೇಟಿವ್ ಅವಾರ್ಡ್ ಕೊಡಬೇಕು ಎಂದಿದ್ದಾರೆ.
ವೀಡಿಯೊ 1.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಜನರು ತಂತ್ರದಿಂದ ಪ್ರಭಾವಿತರಾದರು ಮತ್ತು ಪ್ರಯತ್ನಿಸಲು ಯೋಗ್ಯವಾಗಿದೆ ಎಂದಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ನೆಲವನ್ನು ಜಾರುವಂತೆ ಮಾಡುವುದು ಅನಗತ್ಯ ಅಪಘಾತಗಳಿಗೆ ಕಾರಣವಾಗಬಹುದು ಎಂದಿದ್ದಾರೆ.