ಮಾನ್ಸೂನ್ ಸಮಯದಲ್ಲಿ ಭಾರೀ ಮಳೆ ಕಾಣುವ ಮುಂಬಯಿಯ ಮಂದಿ ತಂತಮ್ಮ ಮನೆಗಳಲ್ಲಿ ಕುಳಿತು ಮಳೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಸಹ ಇವರಲ್ಲಿ ಒಬ್ಬರೆಂದು ತೋರುತ್ತದೆ.
ಪುಟ್ಟ ಬಾಲಕನೊಬ್ಬ ಮಳೆಯಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ ಮಹಿಂದ್ರಾ, “ಕೊನೆಗೂ ಆಗಮಿಸಿದ ಮಾನ್ಸೂನ್ ನೋಡಲು ಮುಂಬಯಿಗೆ ಆಗಮಿಸಿದ ಅನುಭವವನ್ನು ಇದು ಕಟ್ಟಿಕೊಡುತ್ತದೆ. (ಪ್ರತಿಯೊಬ್ಬ ಭಾರತೀಯನೊಳಗೂ ಇರುವ ಮಗುವಿಗೆ ಮೊದಲ ಮಳೆಯಲ್ಲಿ ಸಂಭ್ರಮ ಕಾಣಲು ಎಂದಿಗೂ ದಣಿವಾಗುವುದಿಲ್ಲ)” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋ ಶೇರ್ ಮಾಡಿದ್ದಾರೆ ಮಹಿಂದ್ರಾ.
ಈ ವಿಡಿಯೋ ನೋಡಿ ಖುದ್ದು ತಂತಮ್ಮ ಬಾಲ್ಯದ ದಿನಗಳಲ್ಲಿ ಮಳೆಯನ್ನು ಎಂಜಾಯ್ ಮಾಡುತ್ತಿದ್ದ ಅನುಭವವನ್ನು ಕಾಮೆಂಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ ನೆಟ್ಟಿಗರು.
https://twitter.com/caprataprana/status/1673527748047040512?ref_src=twsrc%5Etfw%7Ctwcamp%5Etweetembed%7Ctwterm%5E1673527748047040512%7Ctwgr%5E99e05cd53c0a1787e084b061c21921b8e8f03d39%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-sums-up-his-monsoon-mood-with-adorable-viral-video-watch-2398536-2023-06-27