24 ವರ್ಷಗಳ ಹಿಂದೆಯೇ ತಯಾರಿಸಲಾಗಿತ್ತು ಎಲೆಕ್ಟ್ರಿಕ್ ವಾಹನ; ಹಳೆ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರಾ 12-09-2023 12:35PM IST / No Comments / Posted In: Automobile News, Car Reviews, Latest News, India, Live News ಬಿ ವೈಡಿ ಮತ್ತು ಟೆಸ್ಲಾ ದಂತಹ ಕಂಪನಿಗಳು ಇಂದು ಜಾಗತಿಕ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ. ಆದರೆ, ಈ ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಮೊದಲ ಇವಿ ಅನ್ನು ಪ್ರಾರಂಭಿಸುವ ಮೊದಲೇ ಮಹೀಂದ್ರಾ ಆಟೋಮೊಬೈಲ್ಸ್ 1999ರಲ್ಲೇ ಮಾಡಿತ್ತು. ಹೌದು, ಮಹೀಂದ್ರಾ ಕಂಪನಿಯ ಈ ತ್ರಿಚಕ್ರ ವಾಹನಕ್ಕೆ ಬಿಜ್ಲೀ ಎಂದು ನಾಮಕರಣ ಮಾಡಲಾಗಿತ್ತು. ಈ ಪದದ ಅರ್ಥ ಹಿಂದಿಯಲ್ಲಿ ವಿದ್ಯುತ್ ಮತ್ತು ಮಿಂಚು ಎಂಬುದಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ 9ರಂದು ನಡೆಯುವ ವಿಶ್ವ ಇವಿ ದಿನದ ಸಂದರ್ಭದಲ್ಲಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ವಾಹನ ಮತ್ತು ಅದರ ಸೃಷ್ಟಿಕರ್ತ ಎಸ್ ವಿ ನಗರ್ಕರ್ ಜೊತೆಗೆ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 9ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, ಇಂದು ವಿಶ್ವ ಇವಿ ದಿನ. ಅದು ನನ್ನನ್ನು ಹಿಂದಿನ ಕಾಲದತ್ತ ಕೊಂಡೊಯ್ದಿದೆ. 1999ರಂದು ನಗರ್ಕರ್ ಅವರು ನಮ್ಮ ಮೊದಲ ವಿದ್ಯುತ್ ಚಾಲಿತ ವಾಹನ (ಇವಿ) ಮೂರು ಚಕ್ರದ ಬಿಜ್ಲಿ ಅನ್ನು ನಿರ್ಮಿಸಿದ್ರು. ನಿವೃತ್ತಿಯಾಗುವ ಮುನ್ನ ಅದು ಅವರ ಕೊಡುಗೆಯಾಗಿತ್ತು. ಆಗ ಅವರು ಹೇಳಿದ ಮಾತುಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರು ಏನನ್ನಾದರೂ ಮಾಡಲು ಬಯಸಿದ್ದರು. ದುಃಖಕರ ವಿಚಾರವೆಂದರೆ ಬಿಜ್ಲೀ ಕೆಲವು ವರ್ಷಗಳ ಉತ್ಪಾದನೆಯ ನಂತರ ನಾವು ಅದಕ್ಕೆ ವಿದಾಯ ಹೇಳಿದ್ದೇವೆ. ಆದರೆ, ಅದರ ಹಿಂದಿನ ಕನಸು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಆ ಕನಸುಗಳು ನನಸಾಗುವವರೆಗೆ ನಾವು ವಿಶ್ರಮಿಸುವುದಿಲ್ಲ ಎಂದು ಬರೆದಿದ್ದಾರೆ. ಆನಂದ್ ಮಹೀಂದ್ರಾ ಅವರ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, 24 ವರ್ಷಗಳ ನಂತರ ಜನರು ಪರಿಸರವನ್ನು ಉಳಿಸುವ ಮಹತ್ವವನ್ನು ಅರಿತುಕೊಂಡಿದ್ದಾರೆ. ಇವಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ವಿವಿಧ ನವೀಕರಿಸಬಹುದಾದ ಶಕ್ತಿಗಳ ಮೂಲಕ ವಿದ್ಯುತ್ ಉತ್ಪಾದನೆಯ ತಡೆಗೋಡೆಯನ್ನು ನಾವು ಪೂರೈಸುತ್ತೇವೆ. ನಾವೆಲ್ಲರೂ ಪರಿಸರ ವ್ಯವಸ್ಥೆಗಾಗಿ ನಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಮಹೀಂದ್ರಾ ಗ್ರೂಪ್ ನ ಬಿಜ್ಲೀ ವಾಹನವನ್ನು ನೆನಪಿಸಿಕೊಂಡ್ರು. ಒಮ್ಮೆ ನಾನು 2001 ರಲ್ಲಿ ಬಿಜ್ಲಿಯಲ್ಲಿ ಪ್ರಯಾಣಿಸಿದ್ದೆ. ಆ ಅನುಭವವು ಅದ್ಭುತವಾಗಿದೆ. ಇಲ್ಲಿಯವರೆಗೆ ಬೇರೆ ಯಾವುದೇ ಆಟೋಗಳಲ್ಲಿ ನನಗೆ ಅಂತಹ ಅನುಭವ ಆಗಿಲ್ಲ ಎಂದು ಹೇಳಿದ್ದಾರೆ. Today is #WorldEVDay And it has propelled me back into the past. 1999 to be precise, when a stalwart of @MahindraRise Mr. Nagarkar, created our first ever EV—the 3 wheeler BIJLEE. It was his gift to us before retirement. I’ll never forget his words then: He wanted to do something… pic.twitter.com/f9KIXr1lkp — anand mahindra (@anandmahindra) September 9, 2023