
ಕಿತ್ತೂರು: ನನ್ನ ರಕ್ತದ ಬಗ್ಗೆ ನನಗೆ ಗೌರವವಿದೆ. ನನ್ನ ಅಮ್ಮ ನನಗೆ ಎದೆಹಾಲು ಕೊಟ್ಟು ಬೆಳೆಸಿದ್ದಾಳೆ ಬಾಟಲಿ ಹಾಲಲ್ಲ ಎಂದು ಸಂಸದ ಅನಂತ ಕುಮಾರ್ ಹೆಗಡೆ ಕಿಡಿಕಾರಿದ್ದರೆ.
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಾತನಾಡಿದ ಸಂಸದ ಅನಂತ ಕುಮಾರ್ ಹೆಗಡೆ, ನಮ್ಮ ರಾಮ, ಹಿಂದೂಗಳು, ಹಿರಿಯರ ಬಗ್ಗೆ ಮಾತನಡಿದರೆ ಸಹಿಸಲ್ಲ. ನನ್ನ ರಕ್ತದ ಬಗ್ಗೆ ನನಗೆ ಗೌರವವಿದೆ. ಇದರ ಬಗ್ಗೆ ಯಾರೇ ಮಾತನಾಡಿದರೂ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಅವರು ಮೈಸೂರು ಗರಡಿಯಲ್ಲಿ ಬೆಳೆದಿದ್ದರೆ ನಾನೂ ಕೂಡ ಮೈಸೂರು ಗರಡಿಯಲ್ಲಿಯೇ ಬೆಳೆದವನು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದರೆ ಏನು ಮಾಡಬೇಕು? ಯುದ್ಧಭೂಮಿಯಲ್ಲಿ ನಿಂತು ಶಾಸ್ತ್ರೀಯ ಸಂಗೀತ, ಭರತನಾಟ್ಯಕ್ಕೆ ಅವಕಾಶವಿಲ್ಲ. ಯುದ್ಧಭೂಮಿಯಲ್ಲಿ ಹೇಗೆ ಮಾತನಾಡಬೇಕೋ ಹಾಗೇ ಮಾಅನಾಡಬೇಕು. ಯುದ್ಧಭೂಮಿಯಲ್ಲಿ ಭರತನಾಟ್ಯ ಮಾಡಲು ಆಗತ್ತಾ? ಎಂದು ವಾಗ್ದಾಳಿ ನಡೆಸಿದ್ದಾರೆ.