
ಅಮೃತಸರದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು, ಒಂಬತ್ತು ವರ್ಷಗಳ ಹಿಂದೆ ಕಳುಹಿಸಿದ ತಮ್ಮ ಹಳೆಯ ಇಮೇಲ್‌ಗೆ ಶಾಲೆಯ ಕಂಪ್ಯೂಟರ್ ಶಿಕ್ಷಕರಿಂದ ರಿಪ್ಲೈ ಪಡೆದು ಅಚ್ಚರಿಗೊಂಡಿದ್ದಾರೆ. 2016 ರಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಪ್ರೇಕ್ಷಾ ಮಹಾಜನ್, ಈ ವಿಚಿತ್ರ ಘಟನೆಯನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. “ನಾನು ನನ್ನ ಇಮೇಲ್ ಅನ್ನು ಪರಿಶೀಲಿಸಿದಾಗ, 7ನೇ ತರಗತಿಯಲ್ಲಿ ನನಗೆ ಕಲಿಸುತ್ತಿದ್ದ ನನ್ನ ಕಂಪ್ಯೂಟರ್ ಶಿಕ್ಷಕರು 9 ವರ್ಷಗಳ ನಂತರ ನನ್ನ ಇಮೇಲ್‌ಗೆ ರಿಪ್ಲೈ ಮಾಡಿದ್ದಾರೆ !” ಎಂದು ಬರೆದಿದ್ದಾರೆ. 2016 ರ ಜೂನ್ 30 ರಂದು ಕಳುಹಿಸಲಾದ ಇಮೇಲ್‌ನಲ್ಲಿ ಪ್ರೇಕ್ಷಾ ತಮ್ಮ ಅಸೈನ್‌ಮೆಂಟ್ ಅನ್ನು ಸಲ್ಲಿಸಿದ್ದರು. ‘ಗುಡ್ ಈವ್ನಿಂಗ್ ಮ್ಯಾಮ್, ನಾನು 7ನೇ ತರಗತಿಯ ಪ್ರೇಕ್ಷಾ. ನಾನು ಅಡೋಬ್ ಇಲ್ಲಸ್ಟ್ರೇಟರ್‌ನಲ್ಲಿ ಈ ಹೂವನ್ನು ಮಾಡಿದ್ದೇನೆ’ ಎಂಬುದು ಇಮೇಲ್ ವಿಷಯವಾಗಿತ್ತು.
2025 ರ ಮಾರ್ಚ್ 1 ರಂದು, ಬಹುಕಾಲದ ನಂತರ ಇಮೇಲ್ ರಿಪ್ಲೈ ಬಂದಿದೆ. ಅವರ ಶಿಕ್ಷಕರು, ಹಳೆಯ ಇಮೇಲ್ ಪರಿಶೀಲಿಸಿ, ‘ಇದು ಸುಂದರವಾಗಿತ್ತು. ಲೇಟ್ ಆಗಿದ್ದಕ್ಕೆ ಕ್ಷಮಿಸಿ’ ಎಂದು ರಿಪ್ಲೈ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಹಾಸ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
“ನಾನು ಈಗ ನನ್ನ ಎಲ್ಲಾ ಬಾಕಿ ಉಳಿದಿರುವ ಇಮೇಲ್‌ಗಳನ್ನು ಪರಿಶೀಲಿಸುತ್ತೇನೆ. ಯಾರಿಗೊತ್ತು, ನನ್ನ ಬಾಲ್ಯದ ಕ್ರಶ್ ಅಂತಿಮವಾಗಿ ರಿಪ್ಲೈ ಮಾಡಿರಬಹುದು” ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. “ಈ ದರದಲ್ಲಿ, ನನ್ನ ಬಾಸ್ 2018 ರ ನನ್ನ ರಜೆ ಅರ್ಜಿಯನ್ನು ಅನುಮೋದಿಸಬಹುದು” ಎಂದು ಇನ್ನೊಬ್ಬರು ಹೇಳಿದ್ದಾರೆ. “ನನ್ನ ಶಾಲೆಯ ಲೈಬ್ರರಿಯನ್ ನಾಲ್ಕು ವರ್ಷಗಳ ನಂತರ ನನ್ನ ಪುಸ್ತಕದ ಎಂಟ್ರಿಯನ್ನು ಹಿಂದಿರುಗಿಸಿದರು. ಈ ವಿಷಯಗಳಿಗೆ ಸಮಯ ಬೇಕಾಗುತ್ತದೆ” ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ.
“AI ಬಾಟ್‌ಗಳು ಈಗ ಭಾವನಾತ್ಮಕವಾಗುತ್ತಿವೆ” ಎಂದು ಇನ್ನೊಬ್ಬರು ತಮಾಷೆಯಾಗಿ ಸೇರಿಸಿದ್ದಾರೆ. “ನಿಮ್ಮ ಶಿಕ್ಷಕರು ರಿಪ್ಲೈ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರಬಹುದು” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಕೆಲಸವನ್ನು ಸುಧಾರಿಸಲು ಮತ್ತು ಮರುಸಲ್ಲಿಸಲು ನಿಮ್ಮ ಶಾಲೆ ಇನ್ನೂ ನಿರೀಕ್ಷಿಸುತ್ತದೆ ಎಂದು ಊಹಿಸಿ” ಎಂದು ಇನ್ನೊಬ್ಬರು ಹಾಸ್ಯ ಮಾಡಿದ್ದಾರೆ. “ಶಿಕ್ಷಕರಿಗೆ ಇಷ್ಟು ವರ್ಷಗಳ ನಂತರ ರಿಮೈಂಡರ್ ನೋಟಿಫಿಕೇಶನ್ ಬಂದಿರಬಹುದು” ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. “ಲೇಟ್ ಆದರೂ ಪರವಾಗಿಲ್ಲ” ಎಂದು ಕೆಲವರು ಶಿಕ್ಷಕರ ಪ್ರತಿಕ್ರಿಯೆಯನ್ನು ಶ್ಲಾಘಿಸಿದ್ದಾರೆ.
Just checked out my mail and saw my computer teacher who used to teach me in 7th class replied to my mail after 9 years!! 😭🤣 pic.twitter.com/gsOBLACaVP
— Preksha Mahajan (@MahajanPreksha) March 1, 2025