ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ
ಮಾರ್ಚ್ 18 ರಂದು ಸಿಂಗ್ ಮತ್ತು ಅವರ ಸಂಘಟನೆ ‘ವಾರಿಸ್ ಪಂಜಾಬ್ ದೇ’ ಸದಸ್ಯರ ವಿರುದ್ಧ ಪೊಲೀಸರು ಕ್ರಮಕೈಗೊಂಡಿದ್ದರು. ಅಮೃತ್ ಪಾಲ್ ಸಿಂಗ್ ಮತ್ತು ಅವರ ಸಹಚರರ ಮೇಲೆ ವರ್ಗಗಳ ನಡುವೆ ವೈಮನಸ್ಸು ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರಿಂದ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರನ್ನು ಇಂದು(ಏಪ್ರಿಲ್ 23) ಪಂಜಾಬ್‌ನ ಮೊಗಾದಿಂದ ಬಂಧಿಸಲಾಗಿದೆ. ಅಮೃತಪಾಲ್ ಸಿಂಗ್ ಈಗ ಪಂಜಾಬ್ ಪೊಲೀಸರ ಬಳಿ ಇದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಅರ್ಪಿತ್ ಶುಕ್ಲಾ ಹೇಳಿದ್ದಾರೆ.
ಗುರುವಾರ (ಏಪ್ರಿಲ್ 20) ಅಮೃತ್‌ಪಾಲ್ ಸಿಂಗ್ ಅವರ ಪತ್ನಿ ಕಿರಣ್‌ದೀಪ್ ಕೌರ್ ಅವರು ಲಂಡನ್‌ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಇಲಾಖೆ ಅವರನ್ನು ವಶಕ್ಕೆ ಪಡೆದುಕೊಂಡಿತ್ತು.