ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಕೆಲವೊಮ್ಮೆ ಆತುರದಲ್ಲಿ ಮಾಡುವ ಪೋಸ್ಟ್ ಗಳಿಂದ ಅನೇಕ ಬಾರಿ ಬಿಗ್ ಬಿ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಇದೀಗ ಅಂಥದ್ದೇ ಟ್ವೀಟ್ ಮಾಡಿರುವ ಅಮಿತಾಬ್ ಟ್ರೋಲ್ ಗೊಳಗಾಗಿದ್ದು, ನಂತರ ಕ್ಷಮೆ ಕೋರಿದ್ದಾರೆ.
ಅಮಿತಾಬ್ ಬಚ್ಚನ್ ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ ತಾವು ತಪ್ಪು ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಭಾನುವಾರ ಟ್ವೀಟ್ ಮಾಡಿದ್ದ ನಟ, ಬ್ಲೋವಿನ್ ಇನ್ ದಿ ವಿಂಡ್ ಹಾಡನ್ನು ಉಲ್ಲೇಖಿಸಿದ್ದಾರೆ. ಅವರು ಮಾಡಿದ ತಪ್ಪೆಂದರೆ ತಮ್ಮ ಟ್ವೀಟ್‌ನಲ್ಲಿ ಹಾಡು ಬೀಟಲ್ಸ್‌ನದ್ದು ಎಂದು ಉಲ್ಲೇಖಿಸಿದ್ದಾರೆ. ಆದರೆ, ಅದು ಗಾಯಕ ಬಾಬ್ ಡೈಲನ್ ಅವರ ಹಿಟ್ ಟ್ರ್ಯಾಕ್ ಆಗಿದೆ. ಹೀಗಾಗಿ ಕೂಡಲೇ ಅವರು ಕ್ಷಮೆ ಕೋರಿದ್ದಾರೆ. ನಾನು ಎಂತಾ ಮೂರ್ಖ ಎಂದು ತನ್ನನ್ನು ತಾನು ಹಳಿದುಕೊಂಡಿದ್ದಾರೆ.
ಇನ್ನು, ನಟ ಅಮಿತಾಬ್ ಬಚ್ಚನ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಾಗಿ ಟ್ರೋಲ್ ಗಳಿಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಟ್ರೋಲರ್ ಗಳ ಆಹಾರವಾಗಿದ್ದಾರೆ.
ಅಂದಹಾಗೆ, ಅಮಿತಾಭ್ ಬಚ್ಚನ್ ಪ್ರಸ್ತುತ ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಜೊತೆಯಾಗಿ ನಟಿಸುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಚಿತ್ರದ ಮೊದಲ ಭಾಗವು 2024 ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.