ಹಾಸನ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಸನ ಜಿಲ್ಲೆಗೆ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಟಾಂಗ್ ಕೊಟ್ಟಿದ್ದಾರೆ.
ಬೇಲೂರಿನಲ್ಲಿ ಮಾತನಾಡಿದ ರೇವಣ್ಣ, ಅಮೆರಿಕ, ರಷ್ಯಾ ಅಧ್ಯಕ್ಷರನ್ನೂ ಪ್ರಚಾರಕ್ಕೆ ಕರೆದುಕೊಂಡು ಬರಲಿ, ನಮಗೆ ದೇವೇಗೌಡರು, ಕುಮಾರಣ್ಣ ಸಾಕು, ಮತ್ಯಾರು ಬೇಡ. ದೇವೇಗೌಡರು, ಕುಮಾರಸ್ವಾಮಿ ಮತ್ತು ಜನರೇ ನಮಗೆ ಚಾಣಕ್ಯರು. ಜನರ ಆಶೀರ್ವಾದದಿಂದ ನಮಗೇನು ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ಜನರು ನೋಡಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಸ್ವಲ್ಪ ದಿನ ರೆಸ್ಟ್ ಗೆ ಕಳುಹಿಸಲು ತೀರ್ಮಾನಿಸಿದ್ದಾರೆ. ನಮಗೆ ಜನ ಉಳಿಯಬೇಕು, ರಾಜ್ಯ ಉಳಿಯಬೇಕು ಎಂದು ರೇವಣ್ಣ ಹೇಳಿದ್ದಾರೆ.