ʻಹ್ಯಾಪಿ ಬರ್ತ್ ಡೇʼ ಎಂದಷ್ಟೆ ಬರೆದು ಐಶ್ ಅಭಿಮಾನಿಗಳ ಕೋಪಕ್ಕೆ ಗುರಿಯಾದ ಅಭಿಷೇಕ್…..!

ಬಾಲಿವುಡ್‌ ನ ಸೂಪರ್‌ ಜೋಡಿಗಳಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಹೆಸರು ಮುಂದಿದೆ. ಮದುವೆಯಾದ್ಮೇಲೆ ಸಿನಿಮಾದಿಂದ ದೂರವಿರುವ ಐಶ್ವರ್ಯ ರೈ ಬಚ್ಚನ್‌ ಉತ್ತಮ ಸೊಸೆ, ತಾಯಿ, ಪತ್ನಿ ಎನ್ನಿಸಿಕೊಂಡಿದ್ದಾರೆ. ನವೆಂಬರ್‌ ಒಂದರಂದು ಹುಟ್ಟುಹಬ್ಬ ಆಚರಿಸಿಕೊಂಡ ಐಶ್‌ ಈಗ ಐವತ್ತನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಐಶ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯದ ಮಳೆಗರೆದಿದ್ದಾರೆ. ಆದ್ರೆ ಪತ್ನಿ ಐಶ್‌ ಗೆ ಅಭಿಷೇಕ್‌ ಬಚ್ಚನ್‌ ಮಾಡಿದ ವಿಶ್‌ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್‌ ವಿರುದ್ಧ ಐಶ್‌ ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ.

ಐಶ್‌ ಹುಟ್ಟುಹಬ್ಬದಲ್ಲಿ ಅಭಿಷೇಕ್‌ ಇರಲಿಲ್ಲ. ಐಶ್‌ ಜೊತೆ ಮಗಳು ಆರಾಧ್ಯ ಇದ್ದಳು. ಅಮ್ಮನ ಬಗ್ಗೆ ಆರಾಧ್ಯ ಮಾತನಾಡಿದ್ದಾಳೆ. ಆದ್ರೆ ಅಭಿಷೇಕ್‌ ಚಿಕ್ಕದೊಂದು ಹುಟ್ಟುಹಬ್ಬದ ಫೋಟೋ ಪೋಸ್ಟ್‌ ಮಾಡಿ ಬಿಟ್ಟಿದ್ದಾರೆ. ಇದೇ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಐಶ್ವರ್ಯಾ ಬ್ಲಾಕ್‌ ಆಂಡ್‌ ವೈಟ್‌ ಫೋಟೋವನ್ನು ಹಂಚಿಕೊಂಡ ಅಭಿಷೇಕ್, ಜನ್ಮದಿನದ ಶುಭಾಶಯಗಳು ಎಂದಷ್ಟೆ ಬರೆದಿದ್ದಾರೆ. ಅದಕ್ಕೆ ಹಾರ್ಟ್‌ ಮತ್ತು ಒಂದು ಎಮೋಜಿ ಹಾಕಿದ್ದಾರೆ.

ಅಭಿಷೇಕ್  ಈ ಪೋಸ್ಟ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ತಂದೆ ಅಮಿತಾಬ್‌ ಬಚ್ಚನ್‌ ಹುಟ್ಟುಹಬ್ಬದಲ್ಲಿ ದೊಡ್ಡ ಲೇಖನವನ್ನೇ ಬರೆಯುವ ಅಭಿಷೇಕ್‌, ಪತ್ನಿ ಹುಟ್ಟುಹಬ್ಬಕ್ಕೆ ಇಷ್ಟು ಸಣ್ಣ ವಿಶ್‌ ಪೋಸ್ಟ್‌ ಹಾಕಿದ್ದಾರೆ. ಇದು ಐಶ್‌ ಗೆ ಮಾಡಿದ ಅವಮಾನ ಎನ್ನುವ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ನಿಮ್ಮ ಹೆಂಡತಿಯ ಹುಟ್ಟುಹಬ್ಬದಂದು ನೀವು ತುಂಬಾ ತಡವಾಗಿ ಪೋಸ್ಟ್ ಮಾಡುತ್ತಿದ್ದೀರಿ ಎಂದು ಇನ್ನೊಬ್ಬರು ಬರೆದ್ರೆ, ಐಶ್‌ ಐವತ್ತನೇ ಹುಟ್ಟುಹಬ್ಬಕ್ಕೆ ನೀವು ಏನೂ ಮಾಡ್ಲಿಲ್ವಾ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ಇದಕ್ಕಿಂತ ಮೊದಲು ಶ್ವೇತಾ ಬಚ್ಚನ್ ಮೇಲೆ ಐಶ್ವರ್ಯಾ ಅಭಿಮಾನಿಗಳು ಕೋಪಗೊಂಡಿದ್ದರು. ನವ್ಯಾ ನವೇಲಿ ನಂದಾ  ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ರಾಂಪ್ ವಾಕ್‌ಗೆ ಪಾದಾರ್ಪಣೆ ಮಾಡಿದ್ದರು. ಅದರ ನಂತರ ಶ್ವೇತಾ, ನವ್ಯಾಗಾಗಿ ಸುದೀರ್ಘ ಪೋಸ್ಟ್ ಅನ್ನು ಬರೆದಿದ್ದಾರೆ. ಅದರಲ್ಲಿ ಅವರು ಮತ್ತು ಅವರ ತಾಯಿ ಜಯಾ ಬಚ್ಚನ್, ನವ್ಯಾರನ್ನು ರಾಂಪ್‌ನಲ್ಲಿ ನೋಡಿದ ನಂತರ  ಭಾವುಕರಾದ್ವಿ ಎಂದಿದ್ದರು. ಇದ್ರಲ್ಲಿ ಐಶ್ ಕೂಡ ವಾಕ್‌ ಮಾಡಿದ್ದು, ಅವರ ಬಗ್ಗೆ ಶ್ವೇತಾ ಏನೂ ಹೇಳಿಲ್ಲವೆಂದು ಅಭಿಮಾನಿಗಳು ಆರೋಪ ಮಾಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read