ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟಿದೆ ಎಂಬುದು ನಿನ್ನೆ ಏರ್ ಇಂಡಿಯಾ ಕಚೇರಿಯಲ್ಲಿ ನಡೆದ ಘಟನೆಯಿಂದ ಸ್ಪಷ್ಟವಾಗ್ತಿದೆ. 600 ಹುದ್ದೆಗೆ 20 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದು, ಇದ್ರಿಂದಾಗಿ ನೂಕು ನುಗ್ಗಲು ಸಂಭವಿಸಿತ್ತು. ಅಭ್ಯರ್ಥಿಗಳನ್ನು ಕಂಟ್ರೋಲ್ ಮಾಡಲು ಏರ್ ಇಂಡಿಯಾ ಸಿಬ್ಬಂದಿ ಹರಸಾಹಸ ಮಾಡಬೇಕಾಯ್ತು.
ಕಲಿನಾದಲ್ಲಿರುವ ಏರ್ ಇಂಡಿಯಾ ಏರ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್‌ನಲ್ಲಿ ವಾಕ್-ಇನ್ ಸಂದರ್ಶನವನ್ನು ನಡೆಸಲಾಯಿತು. ಸಂದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಗಮಿಸಿದ್ದರಿಂದ ಅವ್ಯವಸ್ಥೆ ಉಂಟಾಗಿತ್ತು. ಯುವಕರ ಗುಂಪು ಸಂದರ್ಶನಕ್ಕೆ ತಾ ಮುಂದು, ನಾ ಮುಂದು ಎಂದು ನುಗ್ಗಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.
ಕಂಪನಿ ಹ್ಯಾಂಡಿಮ್ಯಾನ್ ಹುದ್ದೆಗೆ ವಾಕ್-ಇನ್ ಇಂಟರ್ವ್ಯೂ ನಡೆಸಿತ್ತು. ಏರ್‌ಪೋರ್ಟ್ ಲೋಡರ್‌ಗಳ ವೇತನವು ತಿಂಗಳಿಗೆ 20,000 ರಿಂದ 25,000 ರೂಪಾಯಿ ನಡುವೆ ಇರುತ್ತದೆ. ಆದರೆ ಹೆಚ್ಚಿನವರು ಓವರ್‌ಟೈಮ್ ಭತ್ಯೆಯ ನಂತರ 30,000 ಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಉದ್ಯೋಗಕ್ಕಾಗಿ ಶೈಕ್ಷಣಿಕ ಮಾನದಂಡಗಳು ಮೂಲಭೂತವಾಗಿದ್ದರೂ ಅಭ್ಯರ್ಥಿ ದೈಹಿಕ ಬಲ ಮುಖ್ಯವಾಗುತ್ತದೆ.