ಅನುದಾನಿತ, ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ಹೊಸ ಭಾಷೆ, ಹೊಸ ಸಂಯೋಜನೆ, ಹೆಚ್ಚುವರಿ ವಿಭಾಗ ಪ್ರಾರಂಭಿಸಲು ಅರ್ಜಿ

ಧಾರವಾಡ: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಭಾಷೆ, ಹೊಸ ಸಂಯೋಜನೆ ಮತ್ತು ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಇಲಾಖೆಯ ವೆಬ್ ಸೈಟ್ pue.karanataka.gov.in ನಲ್ಲಿ 2024-25 2024-25 new combination/language and add section application ಈ ಲಿಂಕನ್ನು ಬಳಿಸಿ ಅರ್ಜಿಯನ್ನು ಏಪ್ರಿಲ್ 20, 2024 ರ ಮಧ್ಯಾಹ್ನ 12 ಗಂಟೆಯಿಂದ ಮೇ 31, 2024 ರ ಸಂಜೆ 5:30 ಗಂಟೆಯ ಒಳಗೆ ಅರ್ಜಿ ಸಲ್ಲಿಸಬೇಕು.

ಆಸಕ್ತರು ಆನ್ ಲೈನ್ ಅರ್ಜಿ ಸಲ್ಲಿಸಿದ ನಂತರ, ಅದರ ದ್ವಿಪ್ರತಿಗಳನ್ನು ಉಪ ನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಕಾಲೇಜು ರಸ್ತೆ, ಆರ್. ಎನ್. ಶೆಟ್ಟಿ  ಜಿಲ್ಲಾ ಕ್ರೀಡಾಂಗಣ ಎದುರು, ಧಾರವಾಡ.ಇವರಿಗೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಯ(ಪದವಿಪೂರ್ವ) ಉಪ ನಿರ್ದೇಶಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read