ಬೆಂಗಳೂರು : ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಯಾದ ತಿಂಗಳೊಳಗೆ ಹತ್ತಾರು ಅಪಘಾತಗಳು ಸಂಭವಿಸಿತ್ತು. ಈ ಹಿನ್ನೆಲೆ ಅಪಘಾತಗಳನ್ನು ನಿಯಂತ್ರಣ ಮಾಡಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಹೌದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ತಂತ್ರಜ್ಞಾನ ಬಳಸಿ ವಾಹನಗಳ ಅತಿ ವೇಗದ ಚಾಲನೆ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ಮುಂದಾಗಿದೆ.ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಎಐ ಕ್ಯಾಮೆರಾಗಳನ್ನು ಫಿಕ್ಸ್ ಮಾಡಲಾಗಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ಕ್ಯಾಮರಾಗಳಲ್ಲಿ ಎಲ್ಲಾ ರೆಕಾರ್ಡ್ ಆಗಲಿದ್ದು, ರೂಲ್ಸ್ ಬ್ರೇಕ್ ಮಾಡಿದ್ರೆ ಪೊಲೀಸರು ದಂಡ ವಿಧಿಸಲಿದ್ದಾರೆ. ಈ ಕ್ಯಾಮೆರಾಗಳು ವೇಗದ ಮಿತಿಯನ್ನು ಅಳೆಯುವುದಲ್ಲದೇ ಸೀಟ್ ಬೆಲ್ಟ್ ಧರಿಸದಿರುವುದು, ಚಾಲನೆ ವೇಳೆ ಮೊಬೈಲ್ ಫೋನ್ಗಳನ್ನು ಬಳಸುವುದು ಮುಂತಾದ ಉಲ್ಲಂಘನೆಗಳನ್ನು ಸೆರೆಹಿಡಿದು ದಾಖಲಿಸಿಕೊಳ್ಳಲಿವೆ. ಈ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳ ಪ್ರಾಯೋಗಿಕ ಚಾಲನೆ ನೀಡಲಾಗಿದೆ , ಇದರಿಂದ ಅಪಘಾತಗಳು ಮತ್ತು ಸಾವುನೋವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಭಾರತೀಯ ರಸ್ತೆಗಳಲ್ಲಿ ಅತಿವೇಗವೇ ಆಪಘಾತ, ಸಾವುಗಳಿಗೆ ಪ್ರಮುಖ ಕಾರಣ ಎಂದು ಟ್ವೀಟ್ ಮಾಡಿದ್ದಾರೆ.
https://twitter.com/alokkumar6994/status/1684922266486792192?ref_src=twsrc%5Etfw%7Ctwcamp%5Etweetembed%7Ctwterm%5E1684922266486792192%7Ctwgr%5E8a0f9f4576256d946e86cf53070e1c9297338df4%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fai-cameras-installed-across-bangalore-mysuru-expressway-to-monitor-speed-and-book-offences-adgp-alok-kumar-tweets-gsp-633436.html