
ಬೆಂಗಳೂರು: ಕೃಷಿ ಬೆಲೆ ಆಯೋಗದ ಅವಧಿಯನ್ನು ಮುಂದಿನ ಮೂರು ವರ್ಷಗಳವರೆಗೆ ವಿಸ್ತರಿಸಿ ಕೃಷಿ ಇಲಾಖೆ ಆದೇಶಿಸಿದೆ. ಕಳೆದ ಜೂನ್ 25ಕ್ಕೆ ಮುಕ್ತಾಯವಾಗಿದ್ದ ಕೃಷಿ ಬೆಲೆ ಆಯೋಗದ ಅವಧಿಯನ್ನು 2026 ರ ವರೆಗೆ ವಿಸ್ತರಿಸಲಾಗಿದೆ.
ಕೃಷಿ ಅಭಿವೃದ್ಧಿ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ, ಉತ್ತಮ ಮಾರುಕಟ್ಟೆ ಕಲ್ಪಿಸಲು ಕೃಷಿ ಬೆಲೆ ಆಯೋಗ ರಚಿಸಿದ್ದು, ಇದರ ಅವಧಿಯನ್ನು ಈ ಹಿಂದೆ ಮೂರು ಬಾರಿ ವಿಸ್ತರಿಸಲಾಗಿದೆ. ಇದೀಗ ನಾಲ್ಕನೇ ಬಾರಿಗೆ ಕೃಷಿ ಬೆಲೆ ಆಯೋಗ ಅವಧಿಯನ್ನು ವಿಸ್ತರಿಸಲಾಗಿದ್ದು 2026ರ ಜೂನ್ 25 ರವರೆಗೆ ಅವಧಿ ವಿಸ್ತರಿಸಿ ಕೃಷಿ ಇಲಾಖೆ ಆದೇಶಿಸಿದೆ.