ಬಿಜು ನಿರ್ದೇಶನದ ‘ಆಫ್ಟರ್ ಬ್ರೇಕ್ ಅಪ್’ ಚಿತ್ರದ ಟೀಸರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ.
ಈ ಚಿತ್ರವನ್ನು ಫ್ರೈಡೆ ಮ್ಯಾಜಿಕ್ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಧನುಷ್, ನಿಸರ್ಗ ಮಂಜುನಾಥ್ ಹಾಗೂ ಮಧುಸೂದನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ಸ್ಯಾಮ್ ಸಂಗೀತ ಸಂಯೋಜನೆ ನೀಡಿದ್ದು, ಮೊರ ಸಂಕಲನ, ಮಂಜು ನಾಗಪ್ಪ ಸಾಹಸ ನಿರ್ದೇಶನ, ಗಂಗಮ್ ರಾಜು ನೃತ್ಯ ಸಂಯೋಜನೆ, ವಿನೋದ್ ಲೋಕಣ್ಣವರ್ ಛಾಯಾಗ್ರಹಣವಿದೆ.