ಅಪರೂಪದ ಅಲರ್ಜಿ: ʼಲೈಂಗಿಕ ಕ್ರಿಯೆʼ ಬಳಿಕ ಯುವತಿಗೆ ಸಂಕಷ್ಟ !

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇತ್ತೀಚೆಗೆ ವರದಿಯಾದ ಒಂದು ವಿಚಿತ್ರ ವೈದ್ಯಕೀಯ ಪ್ರಕರಣವು ಎಲ್ಲರ ಗಮನ ಸೆಳೆದಿದೆ. 20 ವರ್ಷದ ಯುವತಿಯೊಬ್ಬಳು ತನ್ನ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ನಂತರ ತೀವ್ರವಾದ ಅಲರ್ಜಿಗೆ ಒಳಗಾಗಿದ್ದಾಳೆ. ಈ ಯುವತಿಗೆ ಬ್ರೆಜಿಲ್ ಬೀಜಗಳಿಂದ ತೀವ್ರ ಅಲರ್ಜಿ ಇತ್ತು. ಆಕೆಯ ಸಂಗಾತಿ ಲೈಂಗಿಕ ಕ್ರಿಯೆಗೆ ಎರಡು ಮೂರು ಗಂಟೆಗಳ ಮೊದಲು ಬ್ರೆಜಿಲ್ ಬೀಜಗಳನ್ನು ಸೇವಿಸಿದ್ದನು. ಬಳಿಕ ಸ್ನಾನ ಮಾಡಿ, ಹಲ್ಲುಜ್ಜಿದರೂ ಯುವತಿಗೆ ಅಲರ್ಜಿ ಉಂಟಾಗಿದೆ.

ಲೈಂಗಿಕ ಕ್ರಿಯೆಯ ಸ್ವಲ್ಪ ಸಮಯದ ನಂತರ ಯುವತಿಯ ಯೋನಿ ಮತ್ತು ಯೋನಿಯ ಸುತ್ತಲಿನ ಭಾಗಗಳಲ್ಲಿ ತೀವ್ರವಾದ ತುರಿಕೆ ಮತ್ತು ಊತ ಕಾಣಿಸಿಕೊಂಡಿತು. ಆಕೆಯ ದೇಹದಾದ್ಯಂತ ಚುಕ್ಕೆಗಳು ಕಾಣಿಸಿಕೊಂಡವು ಮತ್ತು ಉಸಿರಾಟದ ತೊಂದರೆ ಹಾಗೂ ತಲೆತಿರುಗುವಿಕೆ ಉಂಟಾಯಿತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯ ವೈದ್ಯರು ಯುವತಿಯ ಮೇಲೆ ವಿವಿಧ ಪರೀಕ್ಷೆಗಳನ್ನು ನಡೆಸಿದರು. ಈ ಪರೀಕ್ಷೆಗಳಲ್ಲಿ ಸಂಗಾತಿಯ ವೀರ್ಯದ ಮೂಲಕ ಬ್ರೆಜಿಲ್ ಬೀಜದ ಅಲರ್ಜಿ ಉಂಟುಮಾಡುವ ಪ್ರೋಟೀನ್‌ಗಳು ಯುವತಿಯ ದೇಹವನ್ನು ಪ್ರವೇಶಿಸಿವೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಸ್ಪರ್ಶ ಅಥವಾ ಮುತ್ತುಗಳ ಮೂಲಕ ಅಲರ್ಜಿಗಳು ಹರಡುತ್ತವೆ. ಆದರೆ ಲೈಂಗಿಕ ಕ್ರಿಯೆಯ ಮೂಲಕ ಅಲರ್ಜಿ ಹರಡುವುದು ಅತ್ಯಂತ ಅಪರೂಪ ಎಂದು ವೈದ್ಯರು ತಿಳಿಸಿದ್ದಾರೆ.

ಈ ಅಪರೂಪದ ಪ್ರಕರಣವು ವೈದ್ಯಕೀಯ ಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಲೈಂಗಿಕ ಕ್ರಿಯೆಯ ನಂತರ ಅಲರ್ಜಿ ಉಂಟಾಗುವುದು ಅತ್ಯಂತ ಅಪರೂಪದ ವಿದ್ಯಮಾನವಾಗಿದ್ದು, ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆಯಾಮಗಳನ್ನು ತೆರೆದಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read