ಬೆಂಗಳೂರು: ಬುಧವಾರ ನಡೆದ ವೈಮಾನಿಕ ಪ್ರದರ್ಶನದ ವೇಳೆ ಎಸ್‌ಕೆಎಟಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಕ್ಯಾಬಿನ್ ತಾಪಮಾನ ನಿಯಂತ್ರಣ ವ್ಯವಸ್ಥೆಯಲ್ಲಿ ದೋಷ ಕಂಡು ಬಂದ ನಂತರ ಒಟ್ಟು 9 SKAT ವಿಮಾನಗಳಲ್ಲಿ ಒಂದು ಇಳಿಯಬೇಕಾಯಿತು.
ಏರೋ ಇಂಡಿಯಾ 2023 ಪ್ರದರ್ಶನದ ಭಾಗವಾಗಿ ಯಲಹಂಕ ವಾಯುನೆಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ನಾಲ್ಕು SKAT ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಪ್ರದರ್ಶನವು 15 ರಿಂದ 20 ನಿಮಿಷಗಳವರೆಗೆ ಇರುತ್ತದೆ.
ಇದ್ದಕ್ಕಿದ್ದಂತೆ ಕಾಕ್‌ಪಿಟ್‌ಗೆ ಹೆಚ್ಚಿನ ಬಿಸಿ ಗಾಳಿ ಬರುತ್ತಿದೆ ಎಂದು ಪೈಲಟ್‌ಗೆ ಅನಿಸಿದೆ. ಅವರು ಬಿಸಿಗಾಳಿಯಿಂದ ತೊಂದೆ ಅನುಭವಿಸಲು ಪ್ರಾರಂಭಿಸಿದ್ದು, ಪ್ರದರ್ಶನ ನಡೆಯುತ್ತಿರುವಾಗಲೇ ತುರ್ತು ಲ್ಯಾಂಡಿಂಗ್ ಮಾಡಿದರು.
ಆಗಿರುವ ಲೋಪವನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದು, ನಾವು ಸ್ಟ್ಯಾಂಡ್‌ಬೈ ವಿಮಾನ ಹೊಂದಿದ್ದೇವೆ. ಆದ್ದರಿಂದ, ಮುಂದಿನ ಎರಡು ದಿನಗಳವರೆಗೆ, ನಮ್ಮ ತಂಡವು ಪ್ರದರ್ಶನದಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಪ್ರದರ್ಶನ ನೀಡಲಿದೆ ಎಂದು ಹೇಳಿದ್ದಾರೆ.