ನಟಿ ಮೀನಾಕ್ಷಿ ಚೌಧರಿ ಇಂದು 27 ನೇ ವಸಂತಕ್ಕೆ ಕಾಲಿಟ್ಟಿದ್ದು, ಕುಟುಂಬದೊಂದಿಗೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 2019ರಲ್ಲಿ ತೆರೆಕಂಡ ‘ಅಪ್‌ಸ್ಟಾರ್ಸ್’ ಎಂಬ ಹಿಂದಿ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. ಬಳಿಕ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ನಟಿ ಮೀನಾಕ್ಷಿ ಇತ್ತೀಚೆಗೆ ‘ಲಕ್ಕಿ ಬಾಸ್ಕರ್’, ‘ಮಟ್ಕಾ’ ಸೇರಿದಂತೆ ದಳಪತಿ ವಿಜಯ್ ಅಭಿನಯದ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಇಂದು ಅವರ ಅಭಿಮಾನಿಗಳು ಮತ್ತು ಸಿನಿ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಲಕ್ಕಿ ಬಾಸ್ಕರ್ ಚಿತ್ರತಂಡ ಇಂದು ಮೀನಾಕ್ಷಿ ಚೌಧರಿ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದು, ಈ ಸಿನಿಮಾದಲ್ಲಿ ಸುಮತಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.