
ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ ನ ಬೇಡಿಕೆಯ ನಟಿ ಹರಿಪ್ರಿಯಾ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಿಸಿದ್ದಾರೆ. 2007ರಲ್ಲಿ ‘ಬಡಿ’ ಎಂಬ ತುಳು ಚಿತ್ರದ ಮೂಲಕ ನಟನಾರಂಗ ಪ್ರಾರಂಭಿಸಿದರು.
ಹರಿಪ್ರಿಯಾ ಕನ್ನಡದಲ್ಲಿ ಅಭಿನಯಿಸಿದ ಮೊದಲ ಸಿನಿಮಾ ‘ಮನಸುಗಳ ಮಾತು ಮಧುರ’ ಬಳಿಕ ‘ವಸಂತಕಾಲ’ ‘ಮಳೆ ಬರಲಿ ಮಂಜು ಇರಲಿ’ ‘ಕಳ್ಳರ ಸಂತೆ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು.
ಹರಿಪ್ರಿಯಾ ಇತ್ತೀಚಿಗೆ ‘ಅಮೃತಮತಿ’ ಮತ್ತು ‘ತಾಯಿ ಕಸ್ತೂರ್ ಗಾಂಧಿ’ ‘ಹ್ಯಾಪಿ ಎಂಡಿಂಗ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದು, ‘ಬೆಲ್ ಬಾಟಮ್ 2’ ‘ಲಗಾಮ್’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇನ್ನು ಕೆಲವು ಸಿನಿಮಾ ಟೈಟಲ್ ಗಳು ಇಂದು ಹೊರಬರುವ ಸಾಧ್ಯತೆ ಇದೆ.