ತೆಲುಗು ತಮಿಳು ಹಿಂದಿ ಹಾಗೂ ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹನ್ಸಿಕಾ ಮೋಟ್ವಾನಿ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬ ಹಾಗೂ ಸ್ನೇಹಿತೆಯರೊಂದಿಗೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ.
2003ರಲ್ಲಿ ತೆರೆಕಂಡ ‘ಹವಾ’ ಚಿತ್ರದಲ್ಲಿ ಸಾಷ ಎಂಬ ಪಾತ್ರದಲ್ಲಿ ಅಭಿನಯಿಸುವ ಮೂಲಕ ಬಾಲ ಕಲಾವಿದೆಯಾಗಿ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದರು ಬಳಿಕ ಹೃತಿಕ್ ರೋಷನ್ ನಟನೆಯ ‘ಕೋಯಿ… ಮಿಲ್ ಗಯಾ’ ಹಾಗೂ ‘ಜಾಗೋ’ ದಲ್ಲಿ ತೆರೆ ಹಂಚಿಕೊಂಡರು.
2007ರಲ್ಲಿ ಬಿಡುಗಡೆಯಾದ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ದೇಶಮುದುರು’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಇವರಿಗೆ ಸಾಲು ಸಾಲು ಆಫರ್ಗಳು ಬಂದವು. 2008ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ‘ಬಿಂದಾಸ್’ ಸಿನಿಮಾದಲ್ಲಿ ಅಭಿನಯಿಸಿದರು. ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚಿಗೆ ‘ರೌಡಿ ಬೇಬಿ’ ‘ಮ್ಯಾನ್’ ಸೇರಿದಂತೆ ‘ಗಾಂಧಾರಿ’ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ.