ಸಿನಿಮಾ ಜಗತ್ತು ಒಂದು ಆಕರ್ಷಕ ಕ್ಷೇತ್ರವಾಗಿದೆ, ಅಲ್ಲಿ ಗೆಲ್ಲಲ್ಲು ಅದೃಷ್ಟ, ಪ್ರತಿಭೆ, ಅವಕಾಶ ಮತ್ತು ಸಂಪೂರ್ಣ ಪರಿಶ್ರಮ ಎಲ್ಲವೂ ಬೇಕಾಗಿದೆ. ಇದೆಲ್ಲದರ ಮಿಶ್ರಣದಿಂದ ಓರ್ವ ಸ್ಟಾರ್ ನಟ ಹುಟ್ಟಿಕೊಳ್ಳುತ್ತಾರೆ. ಅಂತಹ ಸಾಲಿಗೆ ಸೇರುವ ಸ್ಟಾರ್ ನಟರ ಪೈಕಿ ನಟ ಯಶ್ ಕೂಡ ಒಬ್ಬರು. ಕೆಜಿಎಫ್ ಮೂಲಕ ಭಾರತ ಚಿತ್ರರಂಗವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಯಶ್ ಎಂದರೆ ತಪ್ಪಾಗಲಾರದು.
ಪ್ರೇಕ್ಷಕರ ಹೃದಯವನ್ನು ಗೆದ್ದ ಮತ್ತು ಅಭೂತಪೂರ್ವ ಎತ್ತರಕ್ಕೆ ಏರಿದ ಅಂತಹ ಒಬ್ಬ ತಾರೆ ಬೇರೆ ಯಾರೂ ಅಲ್ಲ, ಕನ್ನಡ ಚಿತ್ರರಂಗದ “ರಾಕಿಂಗ್ ಸ್ಟಾರ್” ಎಂದು ಕರೆಯಲ್ಪಡುವ ಕೆಜಿಎಫ್ ಯಶ್. ನಟ ಯಶ್ ಬಗ್ಗೆ ತಮಿಳು ನಟ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಭಾರಿ ವೈರಲ್ ಆಗಿದೆ. ಅವಕಾಶಕ್ಕಾಗಿ ನಟ ಯಶ್ ನನ್ನ ಬಳಿ ಬಂದು ಕಣ್ಣೀರಿಟ್ಟಿದ್ದರು ಎಂದು ತಮಿಳು ನಟ ಜೈ ಆಕಾಶ್ ಹೇಳಿಕೆ ನೀಡಿದ್ದಾರೆ. ಸದ್ಯ, ವಿಡಿಯೋ ವೈರಲ್ ಆಗಿದೆ.
ನಾನು ಹೀರೋ ಆಗಿ ನಟಿಸಿದ ಸಿನಿಮಾದಲ್ಲಿ. ನನ್ನ ತಮ್ಮನ ಪಾತ್ರವನ್ನು ಮಾಡಿದ್ದರು. ಅವರನ್ನು ಆಯ್ಕೆ ಮಾಡಿದ್ದೇ ನಾನು ಎಂದು ಹೇಳಿದ್ದಾರೆ.
ನನಗೆ ಒಂದು ಚಾನ್ಸ್ ಕೊಡಿಸಿ ನಾನು ಮತ್ತೆ ಧಾರವಾಹಿಯನ್ನು ಮಾಡಲ್ಲ, ಇಲ್ಲಿ ಯಾರು ಅವಕಾಶಗಳನ್ನು ಕೊಡುವುದಿಲ್ಲ ಅಂತಾರೆ ಎಂದು ಕಣ್ಣೀರು ಹಾಕಿದ್ದರು. ಅವನನ್ನು ಸಮಾಧಾನ ಮಾಡಿ ಸಿನಿಮಾಗೆ ಆಯ್ಕೆ ಮಾಡಿದೆ. ಕೊನೆಗೆ ಆ ಸಿನಿಮಾ ಹಿಟ್ ಆಯಿತು. ಬಳಿಕ ನಾನು ತೆಲುಗು ಮತ್ತು ತಮಿಳಿನಲ್ಲಿ ಬಿಜಿಯಾದೆ ಮತ್ತು ಯಶ್ ಕನ್ನಡದಲ್ಲಿ ಅವಕಾಶಗಳು ಸಿಕ್ಕಿ ಅವರೊಬ್ಬ ಸ್ಟಾರ್ ಆದರು ಎಂದು ನಟ ಜೈ ಆಕಾಶ್ ಹೇಳಿಕೆ ನೀಡಿದ್ದಾರೆ. ಸದ್ಯ, ವಿಡಿಯೋ ವೈರಲ್ ಆಗಿದೆ.
ಯಶ್ ಅವರ ಸಿನಿ ಪಯಣದಲ್ಲಿ ‘ಕೆಜಿಎಫ್’ ಚಿತ್ರವು ಮಹತ್ವದ ತಿರುವು ನೀಡಿತು. ಅನೇಕ ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭಾರಿ ಚಪ್ಪಾಳೆಯನ್ನು ಪಡೆಯಿತು. ಈ ಚಿತ್ರವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದ್ದಲ್ಲದೆ, ಯಶ್ ಅವರನ್ನು ಅಭೂತಪೂರ್ವ ಖ್ಯಾತಿಗೆ ಏರಿಸಿತು. ಕಲೆಕ್ಷನ್ ನಲ್ಲಿ 200 ಕೋಟಿ ರೂ.ಗಳ ಗಡಿಯನ್ನು ದಾಟಿದ “ಕೆ.ಜಿ.ಎಫ್” ಸಿನಿಮೀಯ ವಿಜಯವಾಗಿ ಹೊರಹೊಮ್ಮಿತು, ಉದ್ಯಮದಲ್ಲಿ ಪರಿಗಣಿಸಬೇಕಾದ ಶಕ್ತಿಯಾಗಿ ಯಶ್ ಅವರ ಸ್ಥಾನವನ್ನು ಭದ್ರಪಡಿಸಿತು.
https://twitter.com/Mysteri13472103/status/1691784050506432958?ref_src=twsrc%5Etfw%7Ctwcamp%5Etweetembed%7Ctwterm%5E1691784050506432958%7Ctwgr%5Ed7979ecd0605737259e96d50b0578336f37c8248%7Ctwcon%5Es1_&ref_url=https%3A%2F%2Fwww.vijayavani.net%2Fyash-cried-to-me-tamil-actors-statement-goes-viral