![ISPL 2024: Actor Ram Charan buys Hyderabad Team; All you need to know about T10 league - BusinessToday](https://akm-img-a-in.tosshub.com/businesstoday/images/story/202312/6587fa5bdaf7e-the-official-promo-of-the-hyderabad-team-shared-by-ram-charan-showed-a-group-of-excited-players-prac-243106458-16x9.jpg?size=948:533)
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಇಂದು ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2007ರಲ್ಲಿ ತೆರೆ ಕಂಡ ಪೂರಿ ಜಗನ್ನಾಥ್ ನಿರ್ದೇಶನದ ‘ಚಿರುತ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. 2009ರಲ್ಲಿ ರಾಜಮೌಳಿ ನಿರ್ದೇಶನದ ‘ಮಗಧೀರ’ ಸಿನಿಮಾದಲ್ಲಿ ಅಭಿನಯಿಸಿದರು. ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಟಾಲಿವುಡ್ ನಲ್ಲಿ ಹೊಸ ಅಧ್ಯಾಯ ಬರೆಯಿತು. ‘ಮಗಧೀರ’ ಮೂಲಕ ರಾಮ್ ಚರಣ್ ಸ್ಟಾರ್ ನಟನಾಗಿ ಹೊಮ್ಮಿದರು.
‘RRR’ ‘ಆಚಾರ್ಯ’ ಸೇರಿದಂತೆ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ, ರಾಮ್ ಚರಣ್ ಇತ್ತೀಚಿಗೆ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಗೇಮ್ ಚೇಂಜರ್’ ಚಿತ್ರತಂಡ ಇಂದು ರಾಮ್ ಚರಣ್ ಹುಟ್ಟು ಹಬ್ಬದ ಪ್ರಯುಕ್ತ ‘ಜರಗಂಡಿ’ ಎಂಬ ಹಾಡನ್ನು ರಿಲೀಸ್ ಮಾಡಲಿದೆ.