ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರವೇಶ ದ್ವಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಏಕೆಂದರೆ ಇಲ್ಲಿ ಸಕರಾತ್ಮಕ ಮತ್ತು ನಕರಾತ್ಮಕ ಶಕ್ತಿಗಳು ಪ್ರವೇಶಿಸುವ, ನಿರ್ಗಮಿಸುತ್ತವೆ. ಆದ ಕಾರಣ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮನೆಯೊಳಗೆ ನಕರಾತ್ಮಕ ಶಕ್ತಿಗಳು ಪ್ರವೇಶಿಸಿದರೆ ಮನೆ ನಾಶವಾಗುತ್ತದೆ ಮತ್ತು ಸಕರಾತ್ಮಕ ಶಕ್ತಿ ಪ್ರವೇಶಿಸಿದರೆ ಮನೆ ಏಳಿಗೆಯಾಗುತ್ತದೆ. ಹಾಗಾಗಿ ಇತರ ಬಾಗಿಲುಗಳಿಗೆ ಹೋಲಿಸಿದರೆ ಮನೆಯ ಮುಖ್ಯ ಬಾಗಿಲು ಗಾತ್ರದಲ್ಲಿ ದೊಡ್ಡದಾಗಿರಬೇಕು, ಸುಂದರವಾಗಿರಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಅಲ್ಲದೇ ಮನೆಯೊಳಗೆ ನಕರಾತ್ಮಕ ಶಕ್ತಿಗಳು ಪ್ರವೇಶಿಸಬಾರದೆಂದು ಬಾಗಿಲಿನ ಅಕ್ಕಪಕ್ಕ ಕಿಟಕಿಗಳನ್ನು ಹೊಂದಬಾರದೆಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಹಾಗೇ ಹಿಂದಿನ ಬಾಗಿಲನ್ನು ಮುಖ್ಯ ಬಾಗಿಲಿನ ಎದುರು ನೇರವಾಗಿ ಇಡಬೇಕು. ಮನೆಯಲ್ಲಿ ಅನೇಕ ಬಾಗಿಲುಗಳಿರಬೇಕು ಮತ್ತು ಆ ಬಾಗಿಲುಗಳು ಉತ್ತರ ಮತ್ತು ಪೂರ್ವ ದಿಕ್ಕಿನ ಕಡೆಗೆ ಹೆಚ್ಚಾಗಿರಬೇಕು.