ಶಿವಮೊಗ್ಗ : ಡೆಂಗ್ಯೂ ಜ್ವರಕ್ಕೆ ನವವಿವಾಹಿತೆಯೊಬ್ಬರು ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ರಿಪ್ಪನ್ ಪೇಟೆಯ ಮಧುರ (31) ಎಂದು ಗುರುತಿಸಲಾಗಿದೆ. ಕಳೆದ 6 ತಿಂಗಳ ಹಿಂದೆ ಮದುವೆಯಾಗಿದ್ದ ಮಧುರ ಕಳೆದ 1 ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಸಾಗರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಡೆಂಗ್ಯೂ ಜ್ವರದ ಲಕ್ಷಣಗಳು: ಡೆಂಗ್ಯೂವಿನ ಮೂಲ ಫ್ಲೇವಿವೈರಸ್ ಗಳು. ಇವುಗಳಲ್ಲಿ ಉಪಜಾತಿಗಳಿವೆ. ಹೆಣ್ಣು ಈಜಿಪ್ಟಿ ಸೊಳ್ಳೆಯ ಕಡಿತದಿಂದ ಅವು ಮನುಷ್ಯರಲ್ಲಿ ಹರಡುತ್ತವೆ. ಸೊಳ್ಳೆಯಲ್ಲಿ ವೈರಸ್ ಇದ್ದರೂ, ಕೆಲವೊಮ್ಮೆ ಜ್ವರ ಬರುವುದಿಲ್ಲ. ಕೆಲವು ಜನರು ತಮ್ಮ ಅರಿವಿಲ್ಲದೆ ಕೆಲವು ಸಮಯದಲ್ಲಿ ಡೆಂಗ್ಯೂ ಸೋಂಕನ್ನು ಹೊಂದಿರಬಹುದು. ಹೀಗಾಗಿ, ವೈರಸ್ ಅನ್ನು ತಡೆದುಕೊಳ್ಳಲು ಮತ್ತು ಡೆಂಗ್ಯೂ ಜ್ವರದಿಂದ ರಕ್ಷಿಸಲು ದೇಹದಲ್ಲಿ ವೈರಸ್ಗೆ ಪ್ರತಿಕಾಯಗಳು ಅಭಿವೃದ್ಧಿಯಾಗುತ್ತವೆ.
ಡೆಂಗ್ಯೂ ಜ್ವರದ ವಿರುದ್ಧ ತಡೆಗಟ್ಟುವ ಕ್ರಮಗಳು:
ಡೆಂಗ್ಯೂ ಬಂದ ನಂತರ ಬಳಲುವುದಕ್ಕಿಂತ ಸೋಂಕಿಗೆ ಒಳಗಾಗುವುದನ್ನು ತಪ್ಪಿಸುವುದು ಉತ್ತಮ.
ಡೆಂಗ್ಯೂವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಸಂಗ್ರಹಿಸಿದ ನೀರಿನಲ್ಲಿ ಡೆಂಗ್ಯೂ ಸೊಳ್ಳೆಗಳು ಬೆಳೆಯುತ್ತವೆ. ಆದ್ದರಿಂದ ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಳೆಯ ಟೈರ್ ಗಳು ಮತ್ತು ಕ್ಯಾನ್ ಗಳನ್ನು ತಕ್ಷಣ ತೆಗೆದುಹಾಕಬೇಕು. ಡೆಂಗ್ಯೂ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಸಕ್ರಿಯವಾಗಿರುತ್ತವೆ. ಆದ್ದರಿಂದ, ಹಗಲಿನಲ್ಲಿ ಮಲಗುವಾಗ ಹಾಸಿಗೆಗೆ ಸೊಳ್ಳೆ ಪರದೆಗಳನ್ನು ಬಳಸಬೇಕು. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ಜಾಲರಿಯನ್ನು ಬಿಗಿಗೊಳಿಸಬೇಕು.