ಸೆಪ್ಟೆಂಬರ್ 5 ರಂದು ಇಂದು ನಮಗೆಲ್ಲಾ ಗೊತ್ತಿರುವ ಹಾಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನದಂದು, ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗೌರವವನ್ನು ಪ್ರದರ್ಶಿಸುತ್ತಾರೆ ಮತ್ತು ತಮ್ಮ ಶಿಷ್ಯರನ್ನು ಯಶಸ್ವಿ ವ್ಯಕ್ತಿಗಳಾಗಿ ರೂಪಿಸುವಲ್ಲಿ ಅವರು ಮಾಡಿದ ಪ್ರಯತ್ನಗಳಿಗಾಗಿ ಅವರನ್ನು ಗೌರವಿಸುತ್ತಾರೆ.
ಈ ದಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಉಡುಗೊರೆಗಳು ಮತ್ತು ಹೂವುಗಳನ್ನು ನೀಡುವ ಮೂಲಕ ತಮ್ಮ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುತ್ತಾರೆ. ಇಲ್ಲೊಬ್ಬ ತುಂಟ ವಿದ್ಯಾರ್ಥಿಯೋರ್ವ ಶಿಕ್ಷಕರಿಗೆ ತರಲೆ ಮಾಡಿ ಶಿಕ್ಷಕರಿಂದ ಪೆಟ್ಟು ತಿಂದ ಹಳೇ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.
ತಮಾಷೆಯಾಗಿ ತುಂಟ ವಿದ್ಯಾರ್ಥಿಯೋರ್ವ ಶಿಕ್ಷಕನ ಮೇಲೆ ಸ್ನೋ ಸಿಂಪಡಿಸಿದ್ದು, ಶಿಕ್ಷಕ ಹುಡುಗನ ಬೆನ್ನಿಗೆ ಬಾರಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಈ ದೃಶ್ಯವನ್ನು ತಮಾಷೆಯಾಗಿ ಸ್ವೀಕರಿಸಿದ್ದಾರೆ. ಕೆಲವರು ಬಹಳ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಶಿಕ್ಷಕ ವಿದ್ಯಾರ್ಥಿಗೆ ಬುದ್ದಿ ಹೇಳಬೇಕಿತ್ತು, ಹಾಗೆಲ್ಲಾ ಹೊಡೆಯಬಾರದು ಎಂದು ಕಮೆಂಟ್ ಮಾಡಿದ್ದಾರೆ.
https://twitter.com/gharkekalesh/status/1698932829353279857?ref_src=twsrc%5Etfw%7Ctwcamp%5Etweetembed%7Ctwterm%5E1698932829353279857%7Ctwgr%5E291469dd67fad8f98cdb46bd124b0c7f35e0698c%7Ctwcon%5Es1_&ref_url=https%3A%2F%2Fwww.india.com%2Fviral%2Fteachers-day-special-guruji-thrashes-student-viral-video-top-trending-twitter-post-6291851%2F