ಚಿಕ್ಕಮಗಳೂರು : ಲಂಚ ಪಡೆಯುತ್ತಿದ್ದ ಚಿಕ್ಕಮಗಳೂರಿನ ಕಂದಾಯ ಇಲಾಖೆಯ ಸರ್ವೆಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಲಂಚ ಪಡೆಯುವಾಗ ಕಂದಾಯ ಇಲಾಖೆಯ ಸರ್ವೆಯರ್ ರಮೇಶಪ್ಪ ಬಲೆಗೆ ಬಿದ್ದಿದ್ದಾರೆ. ಸರ್ವೆಯರ್ ರಮೇಶಪ್ಪ ಜಮೀನಿನ ಸರ್ವೆಗಾಗಿ ರಮೇಶಪ್ಪ 3 ಸಾವಿರ ಲಂಚ ಕೇಳಿದ್ದರು. ಅಂತೆಯೇ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.