ಸಂಗಾತಿಯ ಸ್ಪರ್ಷದಲ್ಲಿ ಜಾದೂ ಇದೆ. ಪರಸ್ಪರ ಕೈಕೈ ಹಿಡಿದು ಓಡಾಡುವ ಪ್ರೇಮಿಗಳಿಗಂತೂ ಒಂದು ರೀತಿಯ ರೋಮಾಂಚನ ಸಹಜ. ಆದ್ರೆ ಈ ಸ್ಪರ್ಷದಲ್ಲಿ ಪ್ರೀತಿ, ಸುರಕ್ಷತಾ ಭಾವ ಮಾತ್ರವಲ್ಲ ಆರೋಗ್ಯವೂ ಇದೆ. ಹೌದು ಸಂಗಾತಿ ಸ್ಪರ್ಷಿಸಿದಾಗ ಹೃದಯ ಬಡಿತ ಮತ್ತು ಉಸಿರಾಟ ಹೊಂದಾಣಿಕೆಯಾಗುತ್ತದೆ, ಇದರಿಂದ ನೋವು ಕೂಡ ಕ್ಷೀಣಿಸುತ್ತದೆ.
ಸಂಶೋಧನೆಯೊಂದರಲ್ಲಿ ಈ ವಿಷಯ ಬಹಿರಂಗವಾಗಿದೆ. ಇದನ್ನು ಅಂತರ್ ವ್ಯಕ್ತೀಯ ಸಿಂಕ್ರೊನೈಸೇಶನ್ ಅಂತಾ ವಿಜ್ಞಾನಿಗಳು ಕರೆಯುತ್ತಾರೆ. ಜೊತೆಯಾಗಿ ಹೋಗುತ್ತಿರುವಾಗ ಪರಸ್ಪರರ ನಡಿಗೆ ಕೂಡ ಅವರಿಗೆ ಅರಿವಿಲ್ಲದಂತೆ ಸಿಂಕ್ ಆಗಿರುತ್ತದೆ.
ಭಾವನಾತ್ಮಕ ಸಿನೆಮಾ ವೀಕ್ಷಿಸುವಾಗ ಅಥವಾ ಜೊತೆಯಾಗಿ ಹಾಡುವಾಗ ಅವರ ಹೃದಯ ಬಡಿತ ಮತ್ತು ಉಸಿರಾಟದ ಲಯ ಪರಸ್ಪರ ಸಿಂಕ್ ಆಗಿರುತ್ತದೆ. ರೊಮ್ಯಾಂಟಿಕ್ ಕಪಲ್ ಜೊತೆಯಲ್ಲಿದ್ದರೆ ಸಾಕು, ಅವರ ಹೃದಯ ಮತ್ತು ಮೆದುಳಿನ ಮಾದರಿ ಸಿಂಕ್ ಆಗುತ್ತವೆ. ನೋವು ಮತ್ತು ಸ್ಪರ್ಷಕ್ಕೆ ಯಾವ ರೀತಿ ಸಂಬಂಧವಿದೆ ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.
ಪತ್ನಿಯ ಹೆರಿಗೆ ನೋವನ್ನು ಗಂಡನ ಒಂದು ಸ್ಪರ್ಷ ಕಡಿಮೆ ಮಾಡಬಲ್ಲದು. ಸಂಗಾತಿಯ ಸ್ಪರ್ಷ ಒಂದು ರೀತಿಯಲ್ಲಿ ನೋವು ನಿವಾರಕವಿದ್ದಂತೆ. ಸಿಂಕ್ರೊನೈಸೇಶನ್ ನಿಂದ್ಲೇ ಇದೆಲ್ಲವೂ ಸಾಧ್ಯವಾಗುತ್ತಿದೆ ಅನ್ನೋದು ವಿಜ್ಞಾನಿಗಳ ಅಭಿಪ್ರಾಯ.