
ಈ ಭವ್ಯ ದೇವಸ್ಥಾನಕ್ಕೆ ಬರೋಬ್ಬರಿ 17 ಶತಮಾನಗಳ ಹಿಂದಿನ ಇತಿಹಾಸವಿದೆ. ಪುರದಂ ತಿರುನಾಳ್ ದೇವನಾರಾಯಣ್ ತಂಪುರನ್ ಎಂಬ ಆಡಳಿತಗಾರ ಈ ದೇವಾಲಯ ನಿರ್ಮಾಣ ಮಾಡಿದ್ದಾನೆ ಎಂಬ ನಂಬಿಕೆ ಇದೆ. ತಂಪುರನ್ ಆರಾಧ್ಯ ಗುರಗಳಾದ ವಿಲ್ವಮಂಗಲರಿಗೆ ಈ ಸ್ಥಳದಲ್ಲಿ ಕೃಷ್ಣನ ಕೊಳಲಿನ ನಾದ ಕೇಳಿದ್ದರಿಂದ ಈ ಜಾಗದಲ್ಲಿ ಶ್ರೀ ಕೃಷ್ಣನ ದೇಗುಲ ನಿರ್ಮಾಣವಾಯ್ತು ಎಂಬ ನಂಬಿಕೆ ಇದೆ.
ಈ ದೇಗುಲಕ್ಕೂ ಟಿಪ್ಪು ಸುಲ್ತಾನನಿಗೂ ಸಂಬಂಧವಿದೆ. ಟಿಪ್ಪು ಸುಲ್ತಾನನ ಆಕ್ರಮಣದ ಸಂದರ್ಭದಲ್ಲಿ ಗುರುವಾಯೂರಿನ ಶ್ರೀಕೃಷ್ಣ ವಿಗ್ರಹವನ್ನ ಇದೇ ದೇವಾಲಯದಲ್ಲಿ ಇಡಲಾಗಿತ್ತು. 1789ರಿಂದ ಸರಿ ಸುಮಾರು ಹತ್ತನ್ನೆರಡು ವರ್ಷಗಳ ಕಾಲ ಇಲ್ಲೇ ವಿಗ್ರಹ ಇತ್ತು ಎಂದು ಹೇಳಲಾಗುತ್ತೆ. ಹೀಗಾಗಿಯೇ ಈಗಲೂ ಗುರುವಾಯೂರಪ್ಪ ಪ್ರಸಾದ ಸ್ವೀಕರಿಸಲು ಈ ದೇಗುಲಕ್ಕೆ ಭೇಟಿ ನೀಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
ಈ ದೇವಸ್ಥಾನದ ಮತ್ತೊಂದು ವಿಶೇಷ ಪಾಲಪಾಯಸಂ. ಅನ್ನ ಹಾಗೂ ಹಾಲಿನಿಂದ ತಯಾರಿಸಿದ ಈ ಸಿಹಿ ಖಾದ್ಯ ತಿನ್ನೋದೇ ಪರಮಾನಂದ. ಈ ಜಾಗಕ್ಕೆ ಕೃಷ್ಣ ಸಾಧುವಿನ ವೇಷ ತೊಟ್ಟು ಬಂದಿದ್ದ ಎಂದೂ ಹೇಳಲಾಗುತ್ತೆ.
ಮಕ್ಕಳಗಾದೇ ಸಂಕಷ್ಟ ಅನುಭವಿಸುತ್ತಿರುವ ದಂಪತಿ ಇಲ್ಲಿಗೆ ಬಂದು ಹರಕೆಯ ರೂಪದಲ್ಲಿ ತೊಟ್ಟಿಲ್ಲನ್ನ ಕಟ್ಟುತ್ತಾರೆ. ಈ ದೇಗುಲಕ್ಕೆ ಕೇರಳ ಮಾತ್ರವಲ್ಲದೇ ನೆರೆ ರಾಜ್ಯಗಳಿಂದಲೂ ಭಕ್ತಸಾಗರವೇ ಹರಿದು ಬರುತ್ತೆ.
ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಅಲೆಪ್ಪಿಯಿಂದ ಈ ಕ್ಷೇತ್ರ ಕೇವಲ 14 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ನಿಮಗೆ ಬಸ್ ಸೌಕರ್ಯವಿದ್ದು ನೀವು ಆರಾಮಾಗಿ ಕೃಷ್ಣನ ದೇಗುಲ ತಲುಪಬಹುದು.
4
