ದೆಹಲಿ MCD ಭವನದಲ್ಲಿ ಮತ್ತೆ ಹೈಡ್ರಾಮಾ: ಗೂಂಡಾಗಳ ರೀತಿ ಆಪ್ –ಬಿಜೆಪಿ ಕಾರ್ಪೊರೇಟರ್ಸ್ ಹೊಡೆದಾಟ

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಹೌಸ್ ನಲ್ಲಿ ಮತ್ತೆ ಹೈಡ್ರಾಮಾ ಸಂಭವಿಸಿದೆ. ಕಾರ್ಪೊರೇಟರ್ಗಳು ಗೂಂಡಾಗಳ ರೀತಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಕಾರ್ಪೊರೇಟರ್ ಗಳು ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ದೆಹಲಿ ಎಂಸಿಡಿ ಭವನದಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಹೊಡೆದಾಡಿಕೊಂಡಿದ್ದಾರೆ. ಆಪ್ ಹಾಗೂ ಬಿಜೆಪಿ ಮಹಿಳಾ ಕಾರ್ಪೊರೇಟರ್ ಗಳ ಮೇಲೆಯೂ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಅನೇಕ ಕಾರ್ಪೊರೇಟರ್ಗಳು ಗಾಯಗೊಂಡಿದ್ದಾರೆ.

ಎಂಸಿಡಿಯ ಸ್ಥಾಯಿ ಸಮಿತಿಯ ಆರು ಸದಸ್ಯರ ಚುನಾವಣೆಗೆ ಮತದಾನ ನಡೆದು 250 ಕೌನ್ಸಿಲರ್‌ಗಳಲ್ಲಿ 242 ಮಂದಿ ಮತ ಚಲಾಯಿಸಿದ್ದಾರೆ ಎಂದು ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read