ಚಳಿಗಾಲದಲ್ಲಿ ಗಾಳಿ ಹೋಗದಂತೆ ಕಿವಿಯನ್ನು ಬೆಚ್ಚಗಿಡೋ ಈ ಇಯರ್ ಮಫ್ ಗಳು ನೋಡಲು ಹೆಡ್ ಫೋನ್ ನಂತೆ ಕಾಣುತ್ತವೆ. ಇದೀಗ ಫ್ಯಾಷನೆಬಲ್ ಇಯರ್ ಮಫ್‌ಗಳು ಎಂಟ್ರಿ ನೀಡಿರೋದು ಎಲ್ಲರನ್ನು ಆಕರ್ಷಿಸಿವೆ.
ಫರ್ ನ ನಾನಾ ಬಗೆಯ ಶೇಡ್ ಹೊಂದಿರುವ ಕಲರ್ ಫುಲ್ ಮಫ್‌ಗಳನ್ನು ಉಡುಪುಗಳಿಗೆ ತಕ್ಕಂತೆ ಮ್ಯಾಚ್ ಮಾಡಿಕೊಳ್ಳಬಹುದು. ಮಾತ್ರವಲ್ಲದೆ, ಫಂಕಿ ಲುಕ್ ಗೆ ಸಾಥ್ ನೀಡುತ್ತವೆ. ಇನ್ನು ಫರ್ ನಲ್ಲೂ ನಾನಾ ಬಗೆಯ ಮೆಟೀರಿಯಲ್‌ಗಳು ದೊರೆಯುತ್ತವೆ.
ಫರ್ ನ ಇಯರ್ ಮಫ್ ನಿರ್ವಹಣೆ ನೋಡಲು ಸುಲಭ ಎನಿಸಿದರೂ ತುಸು ಕಷ್ಟವೇ. ಯಾಕಂದ್ರೆ ಅವನ್ನು ವಾಶ್ ಮಾಡಿದರೆ ತಮ್ಮ ಹಳೆಯ ರೂಪ ಕಳೆದುಕೊಳ್ಳುತ್ತವೆ. ಕಲರ್ ಕೂಡ ಮಾಸಬಹುದು. ಹಾಗಾಗಿ ಇವುಗಳನ್ನು ಕ್ಲೀನ್ ಮಾಡುವುದು ಕೊಂಚ ಕಷ್ಟವೇ.
ಒಬ್ಬರು ಬಳಸಿದ ಇಯರ್ ಮಫ್ ಮತ್ತೊಬ್ಬರು ಬಳಸುವುದು ಸರಿಯಲ್ಲ. ಇದರಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರವರ ಇಯರ್ ಮಫ್ ಗಳನ್ನು ಅವರೇ ಬಳಸುವುದು ಉತ್ತಮ.
ಪೀಚ್, ಯೆಲ್ಲೊ, ಪಿಂಕ್ ಶೇಡ್‌ನಲ್ಲಿ ನಾನಾ ಶೈಲಿಗಳಲ್ಲಿ, ಕಾರ್ಟೂನ್ ಡಿಸೈನ್ ಗಳಲ್ಲಿ ಮಕ್ಕಳನ್ನೂ ಸೆಳೆಯುತ್ತಿವೆ. ಟ್ರಾವೆಲ್ ಮಾಡುವಾಗ, ವಾಕಿಂಗ್ ಹೋಗುವಾಗ ಅಥವಾ ಔಟ್ ಡೋರ್ ಟ್ರಿಪ್ ಪ್ಲಾನ್ ಮಾಡಿದ್ರೆ ಈ ಇಯರ್ ಮಫ್ ಗಳು ಹೇಳಿಮಾಡಿಸಿದಂತಿವೆ.