ಉತ್ತರ ಪ್ರದೇಶ : ಚಲಿಸುವ ಬೈಕ್ ನಲ್ಲೇ ಜೋಡಿಗಳು ರೊಮಾನ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸಿಂಭೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋಡಿಗಳು ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿರುವ ಫೋಟೋಗಳು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಪೊಲೀಸರು ಕೂಡಲೇ ಕ್ರಮಗೈಗೊಂಡು ಮೋಟಾರು ವಾಹನ ಕಾಯ್ದೆಯಡಿ ಬೈಕ್ ಸವಾರನಿಗೆ 8000 ರೂ.ಗಳ ದಂಡ ವಿಧಿಸಿದ್ದಾರೆ ಮತ್ತು ಕಾನೂನು ಅಡಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಹಾಪುರದಲ್ಲಿ ಈ ಘಟನೆ ನಡೆದಿದ್ದು, ಯುವಕ ಬೈಕ್ ಓಡಿಸುತ್ತಿದ್ದು, ಆತನ ಪ್ರೇಯಸಿ ಟ್ಯಾಂಕ್ ಮೇಲೆ ಆತನ ಎದುರಿಗೇ ಕುಳಿತಿದ್ದಳು. ಬೈಕ್ ಓಡಿಸುತ್ತ ಆತ ಆಕೆ ಜೊತೆ ರೊಮ್ಯಾನ್ಸ್ ಮಾಡಿದ್ದಾನೆ.
https://twitter.com/yauvani_1/status/1711700174308028628?ref_src=twsrc%5Etfw%7Ctwcamp%5Etweetembed%7Ctwterm%5E1711700174308028628%7Ctwgr%5Ee8a69f8e689a3f20ec10fec4203b3389a66d98e5%7Ctwcon%5Es1_&ref_url=https%3A%2F%2Fvistaranews.com%2Fviral-news%2Fviral-video-up-couple-romance-on-moving-bike%2F479749.html