ಬೆಂಗಳೂರು : ರಾಜ್ಯದ 5,000 ತಾಂಡಾಗಳನ್ನು ಗುರುತಿಸಿ ಕಂದಾಯ ಗ್ರಾಮವಾಗಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಿರ್ಮಿಸಲಾದ ಬಂಜಾರ ಭವನವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ 2,800 ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಮಾಡಲಾಯಿತು, ಆದರೆ ಬಿಜೆಪಿ ಕೇವಲ 300 ಕಂದಾಯ ಗ್ರಾಮವಾಗಿಸಿತು. ಇನ್ನೂ ಉಳಿದುಕೊಂಡಿರುವ 5,000 ತಾಂಡಾಗಳಿಗೆ ಗ್ರಾಮದ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಬಂಜಾರ ಸಮುದಾಯದ ಅಭಿವೃದ್ಧಿ ಕಾಂಗ್ರೆಸ್ ಸಾಕಷ್ಟು ಕೊಡುಗೆ ಕೊಟ್ಟಿದೆ. ಸೇವಾಲಾಲ್ ಅಧ್ಯಯನ ಪೀಠ ರಚನೆ, ಸೇವಾಲಾಲ್ ಜಯಂತಿ ಆರಂಭಿಸಲಾಯಿತು, ಅಭಿವೃದ್ಧಿ ನಿಗಮ ಸ್ಥಾಪಿಸಿ 375 ಕೋಟಿ ರೂ. ಕೊಟ್ಟಿದ್ದೇವು ಎಂದು ತಿಳಿಸಿದ್ದಾರೆ.