ಟಾಟಾ ನೆಕ್ಸಾನ್ ಹಾಗೂ ಕಿಯಾ ಸೋನೆಟ್ಗೆ ಪ್ರತಿಸ್ಪರ್ಧೆ ನೀಡುವ ಹ್ಯುಂಡೈ ವೆನ್ಯೂ ಪಾಪ್ಯೂಲರ್ ಸಬ್ಕಾಂಪ್ಯಾಕ್ಟ್ ಸಬ್ – 4 ಎಸ್ಯುವಿ ಆಗಿದೆ. ಗ್ರಾಹಕರನ್ನು ಇನ್ನಷ್ಟು ಸೆಳೆಯುವ ನಿಟ್ಟಿನಲ್ಲಿ ಹ್ಯುಂಡೈ ಕಂಪನಿಯು ಇತ್ತೀಚಿಗೆ ADAS ಸೌಕರ್ಯವನ್ನೂ ತಂದಿದೆ. ಇದರ ಎಕ್ಸ್ ಶೋ ರೂಂ ಬೆಲೆ 10.32 ಲಕ್ಷ ರೂಪಾಯಿ ಆಗಿದೆ.
2. ಹ್ಯುಂಡೈ ವೆನ್ಯೂ ಎನ್ ಲೈನ್
ಹ್ಯುಂಡೈ ಕಂಪನಿಯು ವೆನ್ಯೂದ ಸುರಕ್ಷಾ ಮಾಪಕಗಳನ್ನ ಅಭಿವೃದ್ಧಿಗೊಳಿಸಿದ್ದು ಮಾತ್ರವಲ್ಲದೇ ಎಸ್ಯುವಿಯ ಸ್ಪೋರ್ಟ್ ವರ್ಶನ್ನ್ನ ಸೇಫ್ಟಿಯನ್ನೂ ಅಪ್ಗ್ರೇಡ್ ಮಾಡಿದೆ. ಇದೇ ವೆನ್ಯೂ ಎನ್ ಲೈನ್. ಇದರ ಎಕ್ಸ್ ಶೋ ರೂಂ ಬೆಲೆ 11.99 ಲಕ್ಷ ರೂಪಾಯಿ ಆಗಿದೆ.
3. ಹೋಂಡಾ ಎಲಿವೇಟ್
ಹೋಂಡಾ ಕಂಪನಿಯು ತೀರಾ ಇತ್ತೀಚಿಗೆ ತನ್ನ ಮೊಟ್ಟ ಮೊದಲ ಕಾಂಪ್ಯಾಕ್ಟ್ ಎಸ್ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪೆಟ್ರೋಲ್ ಇಂಜಿನ್, ಪ್ರೀಮಿಯಂ ಇಂಟೀರಿಯರ್ಗಳು, ಅತ್ಯಧ್ಭುತ ಸೇಫ್ಟಿ ಫೀಚರ್ಗಳ ಮೂಲಕ ಈ ಕಾರು ಬೆಸ್ಟ್ ಎನಿಸಿದೆ. ಇದರ ಎಕ್ಸ್ ಶೋ ರೂಂ ಮೌಲ್ಯ 14.90 ಲಕ್ಷ ರೂಪಾಯಿ ಆಗಿದೆ.
4. ಎಂಜಿ ಆಸ್ಟರ್
ADAS ನಂತೆಯೇ ಸೇಫ್ಟಿ ಫೀಚರ್ನ್ನು ಹೊಂದಿರುವ ಭಾರತದ ಮೊದಲ ಕ್ಯಾಂಪ್ಯಾಕ್ಟ್ ಎಸ್ಯುವಿಗಳ ಸಾಲಿನಲ್ಲಿ ಆಸ್ಟರ್ ಸೇರುತ್ತದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆಯು 16.99 ಲಕ್ಷ ರೂಪಾಯಿ ಆಗಿದೆ.
5. ಕಿಯಾ ಸೆಲೋಟ್ಸ್
ಭಾರತೀಯ ಮಾರುಕಟ್ಟೆಗೆ ಕೆಲವು ಸಮಯದ ಹಿಂದೆಯಷ್ಟೇ ಕಿಯಾ ಫೇಸ್ಲಿಫ್ಟ್ ಕಿಯಾ ಸೆಲೋಟ್ಸ್ಗಳನ್ನ ಪರಿಚಯಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ಇದರ ಹೊಸ ವೇರಿಯಂಟ್ ಕೂಡ ಮಾರುಕಟ್ಟೆಗೆ ಬಂದಿದೆ. ಇದರ ಎಕ್ಸ್ ಷೋ ರೂಂ ಬೆಲೆಯು 19.39 ಲಕ್ಷ ರೂಪಾಯಿ ಆಗಿದೆ.