40ನೇ ವಯಸ್ಸಿನಲ್ಲೂ 20ರ ಹರೆಯದವರಂತೆ ಕಾಣುವ ಜಪಾನೀಯರ ಫಿಟ್ನೆಸ್‌ ರಹಸ್ಯ…..!

ಜಪಾನೀಯರು ದೀರ್ಘಾಯುಷಿಗಳು. ಇದಕ್ಕೆ ಕಾರಣ ಅವರ ಆರೋಗ್ಯಕರ ಜೀವನ ಶೈಲಿ. ಹೆಲ್ದಿ ಹಾಗೂ ಸ್ಮಾರ್ಟ್‌ ಎರಡರನ್ನೂ ಜಪಾನಿನ ಜನರು ಸೈ ಎನಿಸಿಕೊಳ್ತಾರೆ. ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವ ಮೂಲಕ ದೇಹಕ್ಕೆ ಮುಪ್ಪಾಗದಂತೆ ಕಾಪಾಡಿಕೊಳ್ತಾರೆ. ಅವರಲ್ಲಿ ಸ್ಥೂಲಕಾಯತೆಯೂ ಕಡಿಮೆ. ಜಪಾನಿಯರು ವೃದ್ಧಾಪ್ಯದಲ್ಲಿಯೂ ಯುವಕರಂತೆ ಕಾಣುತ್ತಾರೆ. ಇದರ ಹಿಂದಿರೋ ಕೆಲವು ರಹಸ್ಯಗಳನ್ನು ತಿಳಿದುಕೊಳ್ಳೋಣ. ಅದನ್ನು ಪಾಲಿಸಿದ್ರೆ ಆರೋಗ್ಯಕರ, ಸ್ಮಾರ್ಟ್, ದೀರ್ಘಾಯುಷ್ಯ ಮತ್ತು ಸ್ಲಿಮ್ ಆಗಿ ಉಳಿಯಲು ಸಾಧ್ಯವಾಗುತ್ತದೆ.

ಜಪಾನೀಯರ ಆಹಾರ ಕ್ರಮ…

ಜಪಾನೀಯರ ಆಹಾರ ಸೇವನೆ ಕ್ರಮ ವಿಭಿನ್ನ. ನಿಧಾನವಾಗಿ ತಿನ್ನುವುದು, ಅಗಿದು ಸೇವಿಸುವುದು ಅವರ ಅಭ್ಯಾಸಗಳಲ್ಲೊಂದು. ನಿಧಾನವಾಗಿ ಊಟ ಮಾಡುವುದರಿಂದ ಜೀರ್ಣಕಾರಿ ಶಕ್ತಿ  ಹೆಚ್ಚಾಗುತ್ತದೆ. ಚೆನ್ನಾಗಿ ಜಗಿದು ತಿನ್ನುವುದರಿಂದ ಆಹಾರವು ಸರಿಯಾದ ರೀತಿಯಲ್ಲಿ ಕ್ಯಾಲೊರಿಗಳಾಗಿ ಪರಿವರ್ತನೆಯಾಗುತ್ತದೆ. ಇದು ಅವರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡುತ್ತದೆ.

ಸಣ್ಣ ತಟ್ಟೆಯಲ್ಲಿ ಆಹಾರವನ್ನು ಸೇವನೆ …

ಜಪಾನ್‌ನಲ್ಲಿ ಜನರು ಆಹಾರದ ರುಚಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದು ತಮ್ಮ ಹೊಟ್ಟೆಯನ್ನು ತುಂಬುವ ಸಾಧನವೆಂದು ಪರಿಗಣಿಸುತ್ತಾರೆ. ಅವರು ಎಂದಿಗೂ 100 ಪ್ರತಿಶತ ತಿನ್ನುವುದಿಲ್ಲ. ಪೂರ್ತಿ ಹೊಟ್ಟೆ ತುಂಬುವಷ್ಟು ತಿನ್ನದೆ, ಶೇ.70ರಷ್ಟು ಮಾತ್ರ ಸೇವನೆ ಮಾಡುತ್ತಾರೆ. ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಚಿಕ್ಕ ತಟ್ಟೆಯಲ್ಲೇ ಊಟ ತೆಗೆದುಕೊಳ್ತಾರೆ.

ಚಹಾಕ್ಕೆ ಪ್ರಾಮುಖ್ಯತೆ …

ಜಪಾನಿನ ಸಮುದಾಯವು ಚಹಾಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತದೆ. ಅವರು ದಿನಕ್ಕೆ ಹಲವಾರು ಬಾರಿ ಚಹಾವನ್ನು ಕುಡಿಯುತ್ತಾರೆ. ಈ ಚಹಾವು ಎಂಟಿ-ಒಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ಶಕ್ತಿಯನ್ನು ನೀಡುವುದರ ಜೊತೆಗೆ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ದೂರವಿರಿಸುತ್ತದೆ.

ಜಪಾನೀಯರ ಬೆಳಗಿನ ಉಪಹಾರ

ಜಪಾನಿನ ಜನರು ಬೆಳಗ್ಗೆ ರುಚಿಕರವಾದ ಆಹಾರವನ್ನು ಸೇವಿಸುತ್ತಾರೆ.  ಇದರಿಂದಾಗಿ ಇಡೀ ದಿನಕ್ಕೆ ಬೇಕಾದ ಶಕ್ತಿಯನ್ನು ಪಡೆಯಬಹುದು. ಬೆಳಗಿನ ಉಪಾಹಾರದಲ್ಲಿ ಜಪಾನ್‌ನ ಬಹುತೇಕ ಮನೆಗಳಲ್ಲಿ ಬೇಯಿಸಿದ ಅನ್ನ, ಓಟ್ಸ್ ಮತ್ತು ಬೇಯಿಸಿದ ಮೀನುಗಳನ್ನು ತಿನ್ನಲಾಗುತ್ತದೆ. ಈ ಕಾರಣದಿಂದಾಗಿ, ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ ಮತ್ತು ದೇಹವು ಸಾಕಷ್ಟು ಫೈಬರ್ ಅನ್ನು ಸಹ ಪಡೆಯುತ್ತದೆ. ಇದಲ್ಲದೇ ಜಪಾನಿಯರು ಸೋಯಾ ಆಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇದು ಕಾರ್ಬೋಹೈಡ್ರೇಟ್‌ಗಳ ಜೊತೆಗೆ ಬಹಳಷ್ಟು ಪ್ರೋಟೀನ್‌ಗಳನ್ನು ಹೊಂದಿರುತ್ತದೆ ಮತ್ತು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಇದು ದೀರ್ಘಕಾಲದವರೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಡಿಮೆ ಎಣ್ಣೆ ಬಳಕೆ…

ಜಪಾನಿನಲ್ಲಿ ಆಹಾರವನ್ನು ಬೇಯಿಸುವ ವಿಧಾನವು ಸಾಕಷ್ಟು ವಿಶಿಷ್ಟವಾಗಿದೆ. ಅವರು ಕಡಿಮೆ ಎಣ್ಣೆಯನ್ನು ಬಳಸಿ ತಿನಿಸುಗಳನ್ನು ತಯಾರಿಸುತ್ತಾರೆ. ಉಗಿಯಲ್ಲಿ ಬೇಯಿಸುವುದು, ಕುದಿಸುವುದು, ಹುರಿಯುವುದು ಮತ್ತು ಹುದುಗುವಿಕೆಯನ್ನು ತಿನಿಸುಗಳು ಹೆಚ್ಚಾಗಿ ಆಧರಿಸಿವೆ. ಈ ಕಾರಣದಿಂದಾಗಿ ಹೆಚ್ಚುವರಿ ಕೊಬ್ಬು ದೇಹದಲ್ಲಿ ಸಂಗ್ರಹವಾಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read