ಅಮ್ರೇಲಿ: ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ಆಟವಾಡುತ್ತಿದ್ದ ವೇಳೆ ಕಾರ್ ನೊಳಗೆ ಸಿಲುಕಿದ ಕನಿಷ್ಠ ನಾಲ್ಕು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ರಂಧಿಯಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. 2 ರಿಂದ 7 ವರ್ಷ ವಯಸ್ಸಿನ ಮಕ್ಕಳು ಕಾರ್ ನೊಳಗೆ ಆಟವಾಡುವಾಗ ಲಾಕ್ ಆಗಿದೆ. ಇದರಿಂದಾಗಿ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ, ತಮ್ಮ ಏಳು ಮಕ್ಕಳನ್ನು ಬಿಟ್ಟು ಬೆಳಿಗ್ಗೆ 7.30 ರ ಸುಮಾರಿಗೆ ಭರತ್ ಮಂದಾನಿ ಎಂಬುವವರ ಜಮೀನಿನಲ್ಲಿ ಪೋಷಕರು ಕೆಲಸಕ್ಕೆ ತೆರಳಿದರು. ನಾಲ್ವರು ಮಕ್ಕಳು ತಮ್ಮ ಮನೆ ಬಳಿ ನಿಲ್ಲಿಸಿದ್ದ ತೋಟದ ಮಾಲೀಕರ ಕಾರ್ ನೊಳಗೆ ಪ್ರವೇಶಿಸಿದ್ದಾರೆ.
ಶನಿವಾರ ಸಂಜೆ ಅವರ ಪೋಷಕರು ಮತ್ತು ಕಾರ್ ಮಾಲೀಕರು ಹಿಂತಿರುಗಿದಾಗ ಮಕ್ಕಳ ಶವಗಳು ಪತ್ತೆಯಾಗಿವೆ.
ಅಮ್ರೇಲಿ(ತಾಲೂಕಾ) ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.