
ಶಾರುಖ್ ಖಾನ್ ಅವರ ಅಭಿಮಾನಿಗಳು ರೊಮ್ಯಾಂಟಿಕ್ ಕಾಮಿಡಿಯಲ್ಲಿ ಶಾರುಖ್ ಅವರ ‘ಸುನಿಲ್’ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದು, ಹಾಡಿನ ವಿಡಿಯೋ ಪುನಃ ವೈರಲ್ ಆಗಿದೆ. ಚಿತ್ರಕ್ಕೆ 29 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಭಿ ಹಾನ್ ಕಭಿ ನಾ ಚಿತ್ರದ ತಮ್ಮ ನೆಚ್ಚಿನ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಚಲನಚಿತ್ರವು ಭಾರತದಾದ್ಯಂತ ಥಿಯೇಟರ್‌ನಲ್ಲಿ ಮರು-ಬಿಡುಗಡೆಯಾಗಬೇಕಿದೆ ಎಂದು ಶಾರುಖ್ ಅಭಿಮಾನಿಗಳು ಆಸೆ ಪಟ್ಟಿದ್ದಾರೆ. ಶಾರುಖ್ ಅವರ ಅಭಿನಯ ಎಂದಿಗೂ ಶ್ರೇಷ್ಠವೇ ಆಗಿದ್ದು, ಇವರೊಬ್ಬ ಪ್ರಸಿದ್ಧ ತಾರೆ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.