29 ವಿಜ್ಞಾನಿಗಳನ್ನೇ ಕೊಂದಿದ್ದವು ಜಪಾನ್‌ನ ಈ ರಾಕ್ಷಸಿ ರೋಬೋಟ್‌ಗಳು, ಬಿಡಿ ಭಾಗಗಳನ್ನೆಲ್ಲ ಬೇರ್ಪಡಿಸಿದ್ದರೂ ಡೋಂಟ್‌ ಕೇರ್‌…..!

ಜಪಾನಿನ ರೊಬೊಟಿಕ್ಸ್ ಕಂಪನಿಗಳು ಇತರ ದೇಶಗಳಿಗಿಂತ ಬಹಳ ಮುಂದಿವೆ. ಜಪಾನ್‌ನಲ್ಲಿ ತಯಾರಾಗುವ ಸಿದ್ಧ ರೋಬೋಟ್‌ಗಳನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. 2017 ರಲ್ಲಿ ಜಪಾನ್‌ನ ಪ್ರಸಿದ್ಧ ರೊಬೊಟಿಕ್ಸ್ ಕಂಪನಿ ಮಿಲಿಟರಿ ಬಳಕೆಗಾಗಿ ಬಹಳ ಹೈಟೆಕ್ ರೋಬೋಟ್‌ಗಳನ್ನು ಸಿದ್ಧಪಡಿಸಿತ್ತು.

ಇವು ಸಾಮಾನ್ಯ ರೋಬೋಟ್‌ಗಳಲ್ಲ. ಕೃತಕ ಬುದ್ಧಿಮತ್ತೆಯನ್ನು ಹೊಂದಿದ ವಿಶಿಷ್ಟ ರೋಬೋಟ್‌ಗಳು. ಇವು ಅದೆಂಥಾ ಅನಾಹುತವನ್ನು ಸೃಷ್ಟಿಸಿದ್ದವು ಅಂದರೆ ಆ ಪ್ರಾಜೆಕ್ಟ್‌ ಅನ್ನೇ ಬಂದ್‌ ಮಾಡಬೇಕಾಗಿ ಬಂತು. ಮತ್ತೊಮ್ಮೆ ಅದು ಕಾರ್ಯಾರಂಭ ಮಾಡಲೇ ಇಲ್ಲ. ಈ ರಾಕ್ಷಸ ರೋಬೋಟ್‌ 29 ವಿಜ್ಞಾನಿಗಳನ್ನೇ ಕೊಂದು ಹಾಕಿತ್ತು. ಅದೆಷ್ಟೇ ಹರಸಾಹಸಪಟ್ಟರೂ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ.

ರೋಬೋಟ್‌ ಅನ್ನು ಸಂಪೂರ್ಣ ಬೇರ್ಪಡಿಸಿ ಬಿಡಿಭಾಗಗಳನ್ನೆಲ್ಲ ಕಿತ್ತು ಹಾಕಿದರೂ ಕಕ್ಷೆಯ ಉಪಗ್ರಹಕ್ಕೆ ಸಂಪರ್ಕ ಕಲ್ಪಿಸಿಕೊಂಡು ಅದು ತನ್ನ ರಾಕ್ಷಸಿ ಕೃತ್ಯವನ್ನು ಮುಂದುವರಿಸಿಬಿಟ್ಟಿತ್ತು. ಯಾರೂ ಮಣಿಸಲಾಗದಷ್ಟು ಬಲವನ್ನ ಅದು ಪಡೆದುಕೊಂಡಿತ್ತು. ಈ ಬೆಳವಣಿಗೆಗಳಿಂದ ಕಂಗಾಲಾದ ಜಪಾನ್‌ ವಿಜ್ಞಾನಿಗಳು ಬಹಳ ಪ್ರಯಾಸದ ಬಳಿಕ ರೋಬೋಟ್‌ಗಳನ್ನು ನಿಯಂತ್ರಿಸಿದ್ದರು.

ಪರೀಕ್ಷೆಯ ಸಮಯದಲ್ಲೇ ರೋಬೋಟ್‌ಗಳು 29 ವಿಜ್ಞಾನಿಗಳನ್ನು ಕೊಂದು ಹಾಕಿದ್ದವು. ಇವುಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗಿದ್ದು, ಈ ಕಾರಣದಿಂದಾಗಿ ಅವು ಸ್ವಂತವಾಗಿ ಯೋಚಿಸುವ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಇದೇ ಕಾರಣಕ್ಕೆ ರೋಬೋಟ್‌ಗಳು ಈ ರೀತಿಯ ಮಾರಣಾಂತಿಕ ದಾಳಿ ನಡೆಸಿವೆ.

2017 ರಲ್ಲಿ ಸಿದ್ಧಪಡಿಸಿದ ನಾಲ್ಕು ರೋಬೋಟ್‌ಗಳು ಜನರಲ್ಲಿ ನಡುಕ ಹುಟ್ಟಿಸಿಬಿಟ್ಟಿದ್ದವು. ಈ ರೋಬೋಟ್‌ಗಳನ್ನು ಮಿಲಿಟರಿಗೆ ಹಸ್ತಾಂತರಿಸಬೇಕಾಗಿತ್ತು, ಆದರೆ ಪರೀಕ್ಷೆಯ ಸಮಯದಲ್ಲಿ ವಿಜ್ಞಾನಿಗಳನ್ನೇ ಬಲಿ ಪಡೆದಿದ್ದರಿಂದ ಆ ಯೋಜನೆಯನ್ನೇ ಕೈಬಿಡಲಾಯ್ತು. ಕೆಲವರು ಇದೆಲ್ಲ ಊಹಾಪೋಹವೆಂದೂ ಹೇಳುತ್ತಾರೆ, ಮೂಲಗಳ ಪ್ರಕಾರ ಜಪಾನ್‌ನಲ್ಲಿ ಈ ಭಯಾನಕ ರೋಬೋಟ್‌ಗಳನ್ನು ಸೃಷ್ಟಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read