ಭಾರತದ ಮಾರುಕಟ್ಟೆಗೆ ಸುಜ಼ುಕಿಯಿಂದ ಹಯಾಬೂಸಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

 

ಸುಜ಼ುಕಿ ಮೋಟರ್‌ ಕಾರ್ಪೋರೇಷನ್ ತನ್ನ ಐಕಾನಿಕ್ ’ಹಯಾಬೂಸಾ’ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೂರನೇ ತಲೆಮಾರಿನ ಹಯಾಬೂಸಾ ಮಾಡೆಲ್‌ OBD2-A ಮಾನ್ಯವಾಗಿದ್ದು, ಇಂದಿನ ಕಾಲದಯ ಸವಾರರ ಆದ್ಯತೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

ಮೆಟಾಲಿಕ್ ಥಂಡರ್‌ ಗ್ರೇ/ಕ್ಯಾಂಡಿ ಡೇರಿಂಗ್ ರೆಡ್‌, ಮೆಟಾಲಿಕ್ ಮ್ಯಾಟ್‌ ಬ್ಲಾಕ್ ನಂ.2, ಗ್ಲಾಸ್ ಸ್ಪಾರ್ಕಲ್ ಬ್ಲಾಕ್, ಪರ್ಲ್ ವಿಗರ್‌ ಬ್ಲೂ, ಪರ್ಲ್ ಬ್ರಿಲಿಯಂಟ್ ವೈಟ್ ಬಣ್ಣಗಳಲ್ಲಿ ಹಯಾಬೂಸಾದ ಬೈಕ್‌ಗಳು ಸಿಗುತ್ತವೆ. ಈ ಬೈಕಿನ ಬೆಲೆ 16.90 ಲಕ್ಷ ರೂ.ಗಳು ಇದ್ದು (ದೆಹಲಿ, ಎಕ್ಸ್‌ಶೋರೂಂ) ದೇಶಾದ್ಯಂತ ಇರುವ ಸುಜ಼ುಕಿ ಮೋಟರ್‌ಸೈಕಲ್ ಶೋರೂಂಗಳಲ್ಲಿ ಖರೀದಿ ಮಾಡಬಹುದಾಗಿದೆ.

ವಿಶಿಷ್ಟ ವಿನ್ಯಾಸ ಹೊಂದಿರುವ ಈ ಬೈಕ್‌ ತನ್ನ ಏರೋಡೈನಾಮಿಕ್ ಸಾಮರ್ಥ್ಯಗಳಿಗೆ ಹೆಸರು ವಾಸಿಯಾಗಿದೆ. 1340 ಕ್ಯೂಬಿಕ್ ಸೆಂಮೀ ನಾಲ್ಕು-ಸ್ಟ್ರೋಕ್, ಫ್ಯುಯೆಲ್-ಇಂಜೆಕ್ಟೆಡ್‌, ಲಿಕ್ವಿಡ್ ಕೂಲ್ಡ್‌ ಡಿಓಎಚ್‌ಸಿ, ಇನ್‌-ಲೈನ್ ನಾಲ್ಕು ಎಂಜಿನ್‌ಗಳನ್ನು ಈ ಬೈಕ್ ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read