ನವದೆಹಲಿ: ಬಹು ನಿರೀಕ್ಷಿತ ಕೊಮಾಕಿ ಟಿಎನ್ 95 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ. 1,31,035 (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ನವೀಕರಿಸಿದ ಮಾದರಿಯು ಆ್ಯಂಟಿ-ಸ್ಕಿಡ್ ತಂತ್ರಜ್ಞಾನ ಮತ್ತು LiFePO4 (ಲಿಥಿಯಂ ಐರನ್ ಫಾಸ್ಫೇಟ್) ಅಪ್ಲಿಕೇಶನ್-ಆಧಾರಿತ ಸ್ಮಾರ್ಟ್ ಬ್ಯಾಟರಿಗಳೊಂದಿಗೆ ಇದು ಬಿಡುಗಡೆಗೊಂಡಿದೆ. ಇದು ಅಗ್ನಿ ನಿರೋಧಕವಾಗಿದೆ.
2023 Komaki TN 95 ಡ್ಯುಯಲ್ ಡಿಸ್ಕ್ ಬ್ರೇಕ್ ಸಿಸ್ಟಮ್ ಮತ್ತು ಕೀಲೆಸ್ ನಿಯಂತ್ರಣ ಹೊಂದಿದೆ. ಇದರ ವೈಶಿಷ್ಟ್ಯಗಳೆಂದರೆ ಡ್ಯುಯಲ್ ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ DRL, ಎಲ್ಇಡಿ ಫ್ರಂಟ್ ವಿಂಕರ್ಗಳು, TFT ಸ್ಕ್ರೀನ್, ಆನ್ಬೋರ್ಡ್ ನ್ಯಾವಿಗೇಷನ್, ಸೌಂಡ್ ಸಿಸ್ಟಮ್, ಬ್ಲೂಟೂತ್, ಆನ್-ರೈಡ್ ಕಾಲಿಂಗ್, ಪಾರ್ಕಿಂಗ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಅಸಿಸ್ಟ್ಗಳಾಗಿವೆ.
ಎರಡು ಬಣ್ಣಗಳಲ್ಲಿ ಇವು ಲಭ್ಯವಿವೆ. ಅವೆಂದರೆ ಮೆಟಲ್ ಗ್ರೇ ಮತ್ತು ಚೆರ್ರಿ ರೆಡ್. ಎಲೆಕ್ಟ್ರಿಕ್ ಸ್ಕೂಟರ್ ಮೂರು ಗೇರ್ ಮೋಡ್ಗಳನ್ನು ಹೊಂದಿದ: ಇಕೋ, ಸ್ಪೋರ್ಟ್ಸ್ ಮತ್ತು ಟರ್ಬೊ.