alex Certify 2023 ಬಜಾಜ್ ಪಲ್ಸರ್‌ 125 ಇ20 ಫ್ಯುಯೆಲ್ ರೆಡಿ ಬಿಡುಗಡೆ; ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2023 ಬಜಾಜ್ ಪಲ್ಸರ್‌ 125 ಇ20 ಫ್ಯುಯೆಲ್ ರೆಡಿ ಬಿಡುಗಡೆ; ಇಲ್ಲಿದೆ ವಿವರ

ಭಾರತದ ಮುಂಚೂಣಿ ದ್ವಿಚಕ್ರ ವಾಹನ ಉತ್ಪಾದಕರಲ್ಲಿ ಒಂದಾದ ಬಜಾಜ್ ಆಟೋ ತನ್ನ ಅತ್ಯಂತ ಜನಪ್ರಿಯ ಬೈಕ್ ಪಲ್ಸರ್‌ 125 ಮಾಡೆಲ್‌ನ ಅಪ್ಡೇಟೆಡ್ ಅವತರಣಿಕೆ ಬಿಡುಗಡೆ ಮಾಡಿದೆ. ಬಿಎಸ್‌ 6 ಫೇಸ್ 2 ಹೊರಸೂಸುವಿಕೆಯ ಗುಣಮಟ್ಟಕ್ಕೆ ಅನುಗುಣವಾಗಿ ಈ ಹೊಸ ಮಾಡೆಲ್ ಮಾರುಕಟ್ಟೆಗೆ ಬಂದಿದೆ.

ಬೈಕ್‌ನ ಪವರ್‌ಟ್ರೇನ್‌ನಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಕಂಪನಿ ಮಾಡಿದ್ದು, ಆರ್‌ಡಿಇ ಕಾಂಪ್ಲಿಯಂಟ್ ಹಾಗೂ ಇ20 ಇಂಧನಕ್ಕೆ ಸರಿಹೊಂದುವಂತೆ ಮಾಡಿದೆ. ಈ ಅಪ್ಡೇಟ್‌ನ ಭಾಗವಾಗಿ ಬಿಎಸ್‌6 ಪಿ2ನ ಎಲೆಕ್ಟ್ರಾನಿಕ್‌ ಕಾರ್ಬ್ಯೂರೇಟರ್‌ ಬದಲಿಗೆ ಇಂಧನದ ಇಂಜೆಕ್ಟರ್‌ ಅನ್ನು ಅಳವಡಿಸಲಾಗಿದ್ದು, ಇದರಿಂದ ಇನ್ನಷ್ಟು ಮೈಲೇಜ್ ಪ್ರಾಪ್ತಿಯಾಗಲಿದೆ.

ಇದರೊಂದಿಗೆ ಓಬಿಡಿ-2 ಡಯಾಗ್ನೋಸ್ಟಿಕ್ಸ್‌ ಸಹ ಸೇರಿಸಲಾಗಿದ್ದು, ಮಾಲಿನ್ಯದ ಮಟ್ಟ ಹಾಗೂ ಇಂಜಿನ್ ಆರೋಗ್ಯವನ್ನು ಗಮನಿಸುತ್ತಿರಬಹುದು. ಅವಳಿ ಸ್ಪಾರ್ಕ್‌ ತಂತ್ರಜ್ಞಾನದ ಬದಲಿಗೆ ಒಂದೇ ಸ್ಪಾರ್ಕ್ ಪ್ಲಗ್‌ ಅನ್ನು ಬಜಾಜ್ ಪಲ್ಸರ್‌ 125ಗೆ ಅಳವಡಿಸಲಾಗಿದೆ.

ಹೊಸ ಅಲಾಯ್ ಚಕ್ರದ ವಿನ್ಯಾಸದೊಂದಿಗೆ ಬರುವ ಈ ಬೈಕ್‌ ಗ್ರಾಫಿಕ್ಸ್‌ ಅನ್ನು ಸಹ ಉತ್ತಮ ಪಡಿಸಲಾಗಿದೆ. ಕಾರ್ಬನ್ ಫೈಬರ್‌ ಹಾಗೂ ನಿಯಾನ್ ಎಡಿಷನ್‌ಗಳಿಗೂ ಸಹ ಬದಲಾವಣೆಗಳಾಗಿವೆ. ಮ್ಯಾಟೆ ಬ್ಲಾಕ್, ಮ್ಯಾಟೆ ಬ್ಲೂ ಹಾಗೂ ಮ್ಯಾಟೆ ಸಿಲ್ವರ್‌ ಎಂಬ ಮೂರು ಬಣ್ಣಗಳಲ್ಲಿ ಈ ಬೈಕ್ ಲಭ್ಯವಿದೆ.

ಇಂಧನದ ಕ್ಷಮತೆ, ಸರಾಸರಿ ಇಂಧನ ಕ್ಷಮತೆ, ಹಾಗೂ ಇಂಧನ ಖಾಲಿಯಾಗುವ ಮುನ್ನ ಚಲಿಸಬಲ್ಲ ದೂರದ ವಿವರಗಳನ್ನು ಬೈಕ್‌ನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಳು ಕೊಡಮಾಡುತ್ತವೆ. ಈ ಮೋಟರ್‌ಸೈಕಲ್‌ಗಳಿಗೆ ಹ್ಯಾಲೋಜೆನ್ ಹೆಡ್‌ಲ್ಯಾಂಪ್‌ಗಳಿದ್ದು, ಪೈಲಟ್ ಲ್ಯಾಂಪ್‌ಗಳು ಹಾಗೂ ಎಲ್‌ಇಡಿ ಟೇಲ್ ಲ್ಯಾಂಪ್‌ಗಳು ಸಹ ಇವೆ. ಮುಂಬದಿಯಲ್ಲಿ ಡಿಸ್ಕ್‌ ಬ್ರೇಕ್ ಹಾಗೂ ಹಿಂಬದಿಯಲ್ಲಿ ಡ್ರಮ್‌ ಬ್ರೇಕ್‌ಗಳನ್ನು ಈ ಬೈಕ್ ಒಳಗೊಂಡಿದೆ.

ಹೋಂಡಾದ ಎಸ್‌ಪಿ125, ಟಿವಿಎಸ್‌ ರೈಡರ್‌ 125 ಹಾಗೂ ಹೀರೋ ಗ್ಲಾಮರ್‌ XTECಗಳಿಗೆ ಪೈಪೋಟಿ ನೀಡಲಿದೆ ಬಜಾಜ್ ಪಲ್ಸರ್‌ 125.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...