alex Certify ಇಂದಿನಿಂದ ದೆಹಲಿಯಲ್ಲಿ 2 ದಿನ ‘G20 ಶೃಂಗಸಭೆ’ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ |G20 Summit 2023 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ದೆಹಲಿಯಲ್ಲಿ 2 ದಿನ ‘G20 ಶೃಂಗಸಭೆ’ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ |G20 Summit 2023

ನವದೆಹಲಿ : ಇಂದಿನಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2 ದಿನ ‘G20 ಶೃಂಗಸಭೆ’ ನಡೆಯಲಿದ್ದು, ದೆಹಲಿಗೆ ವಿಶ್ವದ ದಿಗ್ಗಜ ನಾಯಕರ ಆಗಮನವಾಗಿದೆ. ನವದೆಹಲಿಯಲ್ಲಿ ಆಯೋಜನೆಗೊಂಡಿರುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಯುಎಸ್ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ಹಲವು ದಿಗ್ಗಜ ನಾಯಕರು ಆಗಮಿಸಿದ್ದು, ಜಿ 20 ಯಲ್ಲಿ ವಿಶ್ವದ ದಿಗ್ಗಜ ನಾಯಕರ ಸಮಾಗಮವಾಗಲಿದೆ.

2 ದಿನ ಏನೇನು ನಡೆಯಲಿದೆ, ಸಭೆಯ ವೇಳಾಪಟ್ಟಿಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

G20 ಶೃಂಗಸಭೆ ವೇಳಾಪಟ್ಟಿ

ಸೆಪ್ಟೆಂಬರ್ 9 : ಮೊದಲನೇ ದಿನದ ವೇಳಾಪಟ್ಟಿ

ಬೆಳಗ್ಗೆ 09.30ರಿಂದ 10.30ರವರೆಗೆ ಭಾರತ ಮಂಟಪದ ಶೃಂಗಸಭೆಯ ಸ್ಥಳದಲ್ಲಿ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನ ಕಾರ್ಯಕ್ರಮ ಬಳಿಕ ಭಾರತ್ ಮಂಟಪದಲ್ಲಿ ಪ್ರಧಾನ ಮಂತ್ರಿ ಜೊತೆ ಸ್ವಾಗತ ಫೋಟೋಶೂಟ್ ಕಾರ್ಯಕ್ರಮ ನಡೆಯಲಿದೆ.

ನಂತರ 10.30-1.30ರವರೆಗೆ ಸೆಷನ್ 1 ನಡೆಯಲಿದ್ದು, ಶೃಂಗಸಭೆ ಸಭಾಂಗಣದಲ್ಲಿ ಒಂದು ಭೂಮಿ ಕುರಿತು ಸಮಾವೇ ನಡೆಯಲಿದೆ.

ನಂತರ 1.30-3.00ರವರೆಗೆ ಭಾರತ ಮಂಟಪದಲ್ಲಿ ದ್ವಿಪಕ್ಷೀಯ ಸಭೆ ನಡೆಯಲಿದೆ.

3.00-4.45ರವರೆಗೆ ಸೆಷನ್ II: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪದ ಹಂತ 1ರಲ್ಲಿ ಒಂದು ಕುಟುಂಬ ಕುರಿತು ಸಮಾವೇಶ ನಡೆಯಲಿದೆ. ನಂತರ ಹೋಟೆಲ್ಗಳಿಗೆ ತೆರಳಲಿದ್ದಾರೆ.

ಬಳಿಕ 7.00-8.00ರವರೆಗೆ ಭೋಜನಕ್ಕೆ ವಿಶ್ವ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನವಾಗಲಿದೆ.
* 8.00-9.15 ಊಟದ ನಡುವೆ ಮಾತುಕತೆ ನಡೆಯಲಿದೆ.

9.10-9.45ರವರೆಗೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಲೀಡರ್ಸ್ ಲಾಂಜ್, ಭಾರತ ಮಂಟಪದ ಲೆವೆಲ್ 2 ನಲ್ಲಿ ಸೇರುತ್ತಾರೆ. ನಂತರ ಹೋಟೆಲ್ಗಳಿಗೆ ನಿರ್ಗಮ ವಾಸ್ತವ್ಯ.

ದಿನ 2: ಸೆಪ್ಟೆಂಬರ್ 10

ನಾಡಿದ್ದು ಬೆಳಗ್ಗೆ 8.15ರಿಂದ 9.00ರವರೆಗೆ ರಾಜ್ಘಾಟ್ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನವಾಗಲಿದೆ. ನಂತರ ರಾಜ್ಘಾಟ್ನಲ್ಲಿರುವ ನಾಯಕರ ಲಾಂಜ್ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುತ್ತಾರೆ.

9.00-9.20ರ ನಡುವೆ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ಪ್ರದರ್ಶನ ಕೂಡ ನಡೆಯಲಿದೆ.

9.20ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ನಾಯಕರ ಲೌಂಜ್ಗೆ ತೆರಳುತ್ತಾರೆ. ಅಲ್ಲಿಂದ ಪ್ರತ್ಯೇಕ ಮೋಟರ್ಕೇಡ್ಗಳಲ್ಲಿ ಭಾರತ ಮಂಟಪಕ್ಕೆ ನಿರ್ಗಮಿಸಲಿದ್ದಾರೆ.

9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ.ನಂತರ 10.15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಮರ ನೆಡುವ ಕಾರ್ಯಕ್ರಮ.

10.30-12.30ರವರೆಗೆ  ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪ ಹಂತ 2ರಲ್ಲಿ ಒಂದು ಭವಿಷ್ಯ ಕುರಿತು ಸಮಾವೇಶ ನಡೆಯಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...