ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಸರ್ಕಾರಿ ಇಂಧನ ಸಂಗ್ರಹಣ ಡಿಪೋದಲ್ಲಿ ಬೆಂಕಿ ತಗುಲಿ ಕನಿಷ್ಠ 16 ಜನ ಸಾವನ್ನಪ್ಪಿದ್ದಾರೆ.
ಅವಘಡದಲ್ಲಿ ಕನಿಷ್ಠ 50 ಜನ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಅದನ್ನು ನಿಯಂತ್ರಣಕ್ಕೆ ತರುವ ಮೊದಲು ಸರ್ಕಾರಿ ಇಂಧನ ಸಂಗ್ರಹಣಾ ಡಿಪೋದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವಾರು ಮನೆಗಳಿಗೂ ಬೆಂಕಿ ವ್ಯಾಪಿಸಿದ್ದರಿಂದ ಜನ ಭಯಭೀತರಾಗಿ ಓಡಿಹೋದರು. ಉತ್ತರ ಜಕಾರ್ತಾದಲ್ಲಿ ರಾಜ್ಯ ಇಂಧನ ಸಂಸ್ಥೆ ಪರ್ಟಮಿನಾ ನಡೆಸುತ್ತಿರುವ ಡಿಪೋ ಸಮೀಪವಿರುವ ವಸತಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ.
ದುರಂತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ, ಕನಿಷ್ಠ 50 ಜನರು ಗಾಯಗೊಂಡಿದ್ದಾರೆ ಎಂದು ಜಕಾರ್ತ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ.