ಬೆಂಗಳೂರು: ವಿಧಾನಸಭೆಯ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದು, 15ನೇ ವಿಧಾನಮಂಡಲದ ಕೊನೆಯ ಅಧಿವೇಶನಕ್ಕೆ ತೆರೆಬಿದ್ದಂತಾಗಿದೆ.
ಅಧಿವೇಶನದ ಕೊನೆಯ ದಿನವಾದ ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ವಿದಾಯದ ಭಾಷಣ ಮಾಡಿದರು. ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಮಾತನಾಡಿದರು. ಯಡಿಯೂರಪ್ಪನವರ ರಾಜಕೀಯ ಸೇವೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಯಡಿಯೂರಪ್ಪನವರಿಗೆ ಸದನದಿಂದ ವಿದಾಯ ಹೇಳಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೊನೆ ಅಧಿವೇಶನದ ಬಗ್ಗೆ ಮಾತನಾಡುತ್ತಾ ತುಸು ಗದ್ಗದಿತರಾದರು. ರಾಷ್ಟ್ರಗೀತೆಯೊಂದಿಗೆ 15ನೇ ವಿಧಾನಸಭೆಯ ಕಲಾಪವನ್ನು ಮುಕ್ತಾಯಗೊಳಿಸಲಾಯಿತು. ಸ್ಪೀಕರ್ ಕಾಗೇರಿ ಸದನದ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.